ಕಾಸರಗೋಡು, ಏ 10 (DaijiworldNews/SM): ಜಿಲ್ಲೆಯಲ್ಲಿ ಶುಕ್ರವಾರ ಮೂವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 163ಕ್ಕೆ ತಲುಪಿದೆ.
ಮುಳಿಯಾರು ಪೊವ್ವಲ್ ನ ಇಬ್ಬರು ಮಹಿಳೆಯರು, ಕಾಸರಗೋಡು ನಗರಸಭಾ ವ್ಯಾಪ್ತಿಯ ತಳಂಗರೆಯ ಬಾಲಕ ಒಳಗೊಂಡಿದ್ದಾರೆ. ಮೂವರಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಕೇರಳದಲ್ಲಿ ಶುಕ್ರವಾರ ಏಳು ಪ್ರಕರಣ ಪತ್ತೆಯಾಗಿದೆ. ಕಣ್ಣೂರು ಮತ್ತು ಮಲಪ್ಪುರಂನಲ್ಲಿ ತಲಾ ಎರಡು ಪ್ರಕರಣ ದ್ರಢಪಟ್ಟಿದೆ.
ಜಿಲ್ಲೆಯಲ್ಲಿ 10721 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 260 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. 138 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.