ಕಾಶ್ಮೀರ, ಮಾ 2: ತಾಯಿ, ತಂದೆ, ಕುಟುಂಬ, ಮನೆ ಎಲ್ಲವನ್ನೂ ತೊರೆದು ಉಗ್ರ ಸಂಘಟನೆಗೆ ಸೇರಿದ್ದ ಯುವಕನೋರ್ವ ಮತ್ತೇ ಮನೆಗೆ ವಾಪಾಸ್ ಆಗಿದ್ದಾನೆ.
ಮನೆಗೆ ವಾಪಾಸ್ ಆಗಿರುವ ಈ ಉಗ್ರ ಮಜ್ಜಿದ್ ಅರ್ಷದ್ ಎಂದು ತಿಳಿದುಬಂದಿದೆ. ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ಈತ ಕಳೆದ ವರ್ಷ ಭದ್ರತಾ ಪಡೆಗೆ ಶರಣಾಗಿದ್ದ. ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿನ ಹಿಂಸಾಚಾರದಿಂದಾಗಿ ಈತ ಕೆಲ ಯುವಕರ ಜೊತೆಗೆ ಸೇರಿಕೊಂಡು ಉಗ್ರರ ಗುಂಪಿಗೆ ಸೇರಿದ್ದನು. ಆದರೆ ಇದೀಗ ತನ್ನ ತಾಯಿಯ ಕೋರಿಕೆ ಮೇರೆಗೆ ಉಗ್ರರ ಗುಂಪಿನಿಂದ ಮರಳಿ ಮನೆಗೆ ವಾಪಾಸ್ಸಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಯಿ ಮಗನ ಬಳಿ ಅತ್ತು ಮನೆಗೆ ಬರುವಂತೆ ಬೇಡಿಕೊಂಡಿದ್ದಳು. ಅಮ್ಮನ ಅಳುವಿಗೆ ಸ್ಪಂದಿಸಿ ಆತ ವಾಪಾಸ್ಸಾಗಿದ್ದಾನೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಎಸ್. ಪಿ. ವಾಯಿದ್ ಹೇಳಿದ್ದಾರೆ.