ಮಂಗಳೂರು, ಎ.11 (Daijiworld News/MB) : ಕರಾವಳಿಯಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಿಂದನೆ ಮುಂದುವರಿದಿದ್ದು ಮಲ್ಲೂರಿನ ಉದ್ದಬೆಟ್ಟುವಿನಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಲಾಗಿದ್ದು ಈ ಕುರಿತಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಮಾಯಿಲ್ ಬೊಳ್ಳಕಿಣಿ ಹಾಗೂ ಅಶ್ರಫ್ ಉದ್ದಬೆಟ್ಟು ಈ ಪ್ರಕರಣದ ಆರೋಪಿಗಳು.
ಮನೆಮನೆಗೆ ತೆರಳಿ ಬಾಣಂತಿಯರ ಸರ್ವೇ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹಾಗೆಯೇ ಆಶಾ ಕಾರ್ಯಕರ್ತೆಯರು ಈ ಮೊದಲು ಮನೆಗಳಿಗೆ ತೆರಳಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ಗಳನ್ನು ಕೇಳಿದ್ದಾರೆ ಎಂಬ ಆರೋಪಗಳು ಕೂಡಾ ಕೇಳಿಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ ಕೊಣಾಜೆಯಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಆರೋಪ ಕೇಳಿ ಬಂದಿತ್ತು.