ಉಡುಪಿ, ಎ.11 (DaijiworldNews/PY) : ಜಿಲ್ಲೆಯಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ.ಜನರಿಗೆ 7 ಗಂಟೆಯಿಂದ 11 ಗಂಟೆಯವರೆಗೆ ಅಗತ್ಯ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಅವಕಾಶ ನೀಡಲಾಗಿದೆ ಆದರೂ ಜನರು 11 ಗಂಟೆಯ ನಂತರವೂ ಮನೆಯಿಂದ ಹೊರ ಹೋಗುತ್ತಾ ಬರುತ್ತಿದ್ದಾರೆ ಅಂತವರ ವಿರುದ್ದ ಪ್ರಕರಣ ದಾಖಲಿಸಲಾಗುತ್ತದೆ ಅಲ್ಲದೇ, ಅವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಗಡಿಗಳನ್ನು ಮುಚ್ಚಲಾಗಿದೆ. ಹಾಗಾಗಿ ಗಡಿಯಿಂದ ಹೊರ ಹೋಗಲು ಹಾಗು ಒಳ ಬರಲು ಸಾಧ್ಯವಿಲ್ಲ. ಎ.14ರ ನಂತರ ಲಾಕ್ಡೌನ್ ವಿಸ್ತರಣೆ ಮಾಡುತ್ತಾರೆ ಎನ್ನುವ ನಿಟ್ಟಿನಲ್ಲಿ ಬಹಳಷ್ಟು ಜನ ಮನೆಯಿಂದ ಹೊರ ಹೋಗುವುದಕ್ಕೆ ಪ್ರಾರಂಭಿಸಿದ್ದಾರೆ. ಅಂತಹ ಕೆಲಸವನ್ನು ಯಾರೂ ಮಾಡಬೇಡಿ ಎಂದು ತಿಳಿಸಿದ್ದಾರೆ.
ನಮ್ಮ ಗಡಿಯಲ್ಲಿ ಯಾರನ್ನೂ ಕೂಡಾ ಯಾರನ್ನೂ ಹೊರ ಹೋಗಲು ಬಿಡುವುದಿಲ್ಲ. ಹಾಗಂತ ಮನೆಯಲ್ಲಿರುವವರು ಹೇಗೆ ಬೇಕೋ ಹಾಗೆ ಓಡಾಡುವಂತಿಲ್ಲ. ಈಗಾಗಲೇ 7 ಗಂಟೆಯಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಸಾಕಷ್ಟು ಜನ ಖರೀದಿ ಮಾಡಲು ಬರುತ್ತಿದ್ದಾರೆ. ಆದರೆ, ಒಂದಿಷ್ಟು ಜನ 11 ಗಂಟೆಯ ನಂತರ ಅನಗತ್ಯವಾಗಿ ಓಡಾಡುತ್ತಿರುವುದು ಕಂಡುಬಂದಿದ್ದು, ಅಂತವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಅಲ್ಲದೇ, ಅಂತವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇದೇ ರೀತಿಯಾಗಿ ನಾವು ಈಗಾಗಲೇ 350ಕ್ಕೂ ಹೆಚ್ಚಿನ ವಾಹನಗಳನ್ನು ವಶಕ್ಕೆಪಡೆದುಕೊಂಡಿದ್ದೇವೆ. ಆದ್ದರಿಂದ ಸಾರ್ವಜನಿಕರು ಮನೆಯಿಂದ ಹೊರಬರುವ ಮುನ್ನ ಆಲೋಚಿಸಿ, ಏಕೆಂದರೆ, ನಿಮ್ಮ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಅಲ್ಲದೇ, ಪ್ರಕರಣ ದಾಖಲಾಗುತ್ತದೆ. ದಯವಿಟ್ಟು ಯಾರೂ ಕೂಡಾ ಮನೆಯಿಂದ ಹೊರಬರಬೇಡಿ ಎಂದು ಡಿಸಿ ಮನವಿ ಮಾಡಿದ್ದಾರೆ.