ಕಾಸರಗೋಡು, ಎ.11 (DaijiworldNews/PY) : ಜಿಲ್ಲೆಯಲ್ಲಿ ಇದುವರೆಗೆ 35 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈಗ 131 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ 11 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ ಎರಡು ಪ್ರಕರಣ ದೃಢಪಟ್ಟಿದ್ದು, ಇಬ್ಬರು ಹತ್ತು ಹಾಗೂ ಎಂಟು ವರ್ಷದ ಮಕ್ಕಳಾಗಿದ್ದಾರೆ.
ಈ ಹಿಂದೆ ಮೊಗ್ರಾಲ್ ಪುತ್ತೂರು ನಿವಾಸಿಯಾದ ಇವರ ತಾಯಿಗೆ ಸೋಂಕು ಕಂಡು ಬಂದಿತ್ತು . ಇದರಿಂದ ಈ ಇಬ್ಬರು ಮಕ್ಕಳು ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದರು . ಜಿಲ್ಲೆಯ ಐಸೋಲೇಷನ್ ವಾರ್ಡ್ ನಲ್ಲಿ 263 ಮಂದಿ ನಿಗಾದಲ್ಲಿದ್ದಾರೆ.