ಸುರತ್ಕಲ್, ಎ.13 (Daijiworld News/MB) : ಕೊರೊನಾ ಸೋಂಕು ತಗಲಿದೆ ಎಂದು ದುಷ್ಕರ್ಮಿಗಳು ಸುಳ್ಳು ಪ್ರಚಾರ ಮಾಡುತ್ತಿದ್ದು ಈ ಕುರಿತಾಗಿ ತಡಬೈಲಿನ ಫಾತಿಮಾ ಸೂಪರ್ ಮಾರ್ಕೆಟ್ ಮಾಲಕ ಮಹಮ್ಮದ್ ಅಲಿ ಅವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ಮಕ್ಕಳು ವಿವಾಹ ಕಾರ್ಯಕ್ರಮಕ್ಕೆಂದು ವಿದೇಶದಿಂದ ಬಂದಿದ್ದು ಅವರು ಫೆ. 10 ರಂದೇ ವಾಪಾಸ್ ಹೋಗಿದ್ದಾರೆ. ಆದರೂ ಕೆಲವರು ಸಮಾಜದ ಸ್ವಾಸ್ಥ್ಯ ಕೆಡಿಸುವ ದುರುದ್ದೇಶದಿಂದ ಹಾಗೆಯೇ ವ್ಯಾಪಾರಕ್ಕೆ ನಷ್ಟ ಉಂಟು ಮಾಡಲೆಂದು ಮನೆಯವರಿಗೆ ಕೊರೊನಾ ತಗಲಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊರೊನಾ ಸೋಂಕು ಹರಡಿದೆ ಎಂಬ ಸುದ್ದಿ ಕುರಿತಾಗಿ ಆರೋಗ್ಯ ಅಧಿಕಾರಿಗಳು ಮನೆಗೆ ಬಂದು ವಿಚಾರಣೆ ಮಾಡಿ ಹೋಗಿದ್ದಾರೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಮಾಡುತ್ತಿರುವವರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.