ಉಳ್ಳಾಲ, ಏ 13 (Daijiworld News/MSP): ದೇರಳಕಟ್ಟೆ ನಿತ್ಯಾನಂದ ನಗರ ವೈನ್ ಶಾಪ್ ದೋಚಿದ ಕಳ್ಳನನ್ನು ಕೊಣಾಜೆ ಪೊಲೀಸರು ಭಾನುವಾರ ಬಂಧಿಸಿದ್ದು, ಇನ್ನೋರ್ವ ಕಳ್ಳ ತಲೆಮರೆಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನಾಟೆಕಲ್ ನಿವಾಸಿ ಫಯಾನ್ ಯಾನೆ ಪಯ್ಯ (25) ಬಂಧಿತ ಆರೋಪಿಯಾಗಿದ್ದಾನೆ. ಕೃತ್ಯಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಫಾರೂಕ್ ಎಂಬಾತ ನಾಪತ್ತೆಯಾಗಿದ್ದು ಈತನ ಬಂಧನಕ್ಕೆ ಬಲೆಬೀಸಲಾಗಿದೆ.
ಆರೋಪಿಗಳು ಲಾಕ್ ಡೌನ್ ಸಮಯದಲ್ಲಿ ನಿತ್ಯನಂದ ನಗರದಲ್ಲಿರುವ ಅಂಗಡಿಯಿಂದ ಸುಮಾರು 25,000 ಮದ್ಯವನ್ನುಕಳವುಗೈದಿದ್ದು , ಮಧ್ಯವನ್ನು ತೊಕ್ಕೊಟ್ಟು ಒಳ ಪೇಟೆಯ ರೈಲ್ವೆ ಹಳಿಯಲ್ಲಿ ಕುಳಿತು ಹೊರ ರಾಜ್ಯದ ಕಾರ್ಮಿಕರಿಗೆ ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದಾಗ ಕುರಿತು ಮಾಹಿತಿ ಲಭಿಸಿದೆ.