Karavali
ದ.ಕ., ಉಡುಪಿ ಜಿಲ್ಲೆಯ 3000ಕ್ಕೂ ಹೆಚ್ಚಿನ ಕುಟುಂಬಗಳಿಗೆ ನೆರವಾದ ದಾಯ್ಜಿವರ್ಲ್ಡ್ ವಾಹಿನಿಯ 'ನಾವು ನಿಮ್ಮೊಂದಿಗೆ' ಅಭಿಯಾನ
- Mon, Apr 13 2020 04:13:43 PM
-
ವಾಲ್ಟರ್ ನಂದಳಿಕೆ,
ಸ್ಥಾಪಕರು,
ದೈಜಿವರ್ಲ್ಡ್ ಮಾಧ್ಯಮ ಸಮೂಹ ಸಂಸ್ಥೆ.
ಲಾಕ್ ಡೌನ್ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಅರಿತು ದೈಜಿವರ್ಲ್ಡ್ ಸಂಸ್ಥೆಯೂ ಕೈಗೆತ್ತಿಕೊಂಡ 'ನಾವು ನಿಮ್ಮೊಂದಿಗೆ ' ಕಾರ್ಯಕ್ರಮಕ್ಕೆ ಅಭೂತ ಪೂರ್ವ ಸ್ಪಂದನೆ, ಸಹಕಾರ ದೊರಕಿದ್ದು ವಿಶೇಷ ಸಫಲತೆಯನ್ನು ಕಂಡಿದೆ. ಕಾರ್ಯಕ್ರಮದ ರೂಪುರೇಷೆ ತಯಾರಿ ಸಂದರ್ಭದಲ್ಲಿ ನಾವು ಸುಮಾರು 100 ರಿಂದ 200 ಕುಟುಂಬಗಳಿಗೆ ನೆರವಾಗುವ ಯೋಜನೆ ನಮ್ಮ ಮುಂದಿತ್ತು. ಇದೀಗ ಅಭಿಯಾನ ಕೊನೆಗೊಂಡು ಹಲವು ದಿನಗಳು ಕಳೆದರೂ ನಮ್ಮ ಕಚೇರಿಗೆ ಸಹಾಯ ಹಸ್ತ ಕೇಳಿ ನಿರಂತರ ಕರೆಗಳು ಬರುತ್ತಿವೆ. ನಮ್ಮ ಸಿಬ್ಬಂದಿಗಳು ಎಲ್ಲಾ ಕರೆಗಳಿಗೆ ಸ್ಪಂದಿಸಿ ಅಗತ್ಯ ಸಹಾಯ ಬೇಕಾಗಿರುವ ಕುಟುಂಬಗಳಿಗೆ ನೆರವು ನೀಡುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಈವರೆಗೆ ನಾವು ಟಿವಿ ಲೈವ್ ಶೋ , ವಾಟ್ಸಾಪ್ ಹಾಗೂ ಕಚೇರಿಯ ಇತರ ದೂರವಾಣಿ ಮೂಲಕ 3000 ಕ್ಕಿಂತಲೂ ಹೆಚ್ಚಿನ ಕರೆಗಳನ್ನು ಸ್ವೀಕರಿಸಿದ್ದೇವೆ. ಈ ಪೈಕಿ ನಾವು 2500 ಕರೆಗಳಿಗೆ ಸ್ಪಂದಿಸಿ ದಿನಸಿ ಪೊಟ್ಟಣಗಳನ್ನು ಹಾಗೂ ಔಷಧಿಯನ್ನು ವಿತರಿಸುವಲ್ಲಿ ಸಫಲರಾಗಿದ್ದೇವೆ.
ಕಾರ್ಯಕ್ರಮದ ಸಂದರ್ಭದಲ್ಲಿ ನಾವು ಯಾವುದೇ ಹಣಕಾಸಿನ ನೆರವನ್ನು ಕೋರದಿದ್ದರೂ ನಮ್ಮ ಅಭಿಯಾನವನ್ನು ಮೆಚ್ಚಿ ಉಭಯ ಜಿಲ್ಲೆಗಳಿಂದ ಸೇರಿದಂತೆ ದೇಶ-ವಿದೇಶಗಳಿಂದ ಹಲವಾರು ದಾನಿಗಳು ತಮ್ಮ ಅರ್ಥಿಕ ನೆರವನ್ನು ನೀಡಲು ಮುಂದೆ ಬಂದಿದ್ದರು. ಈ ಸಂದರ್ಭದಲ್ಲಿ ನಾವು ಆರ್ಥಿಕ ನೆರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಕೋರಿದ್ದೆವು. ಇನ್ನು ಕೆಲ ದಾನಿಗಳು ದಿನಸಿಗಳನ್ನು, ಆಹಾರ ಸಾಮಗ್ರಿಗಳನ್ನು ವಿತರಿಸಲು ನಮಗೆ ಆರ್ಥಿಕ ನೆರವು ಘೋಷಿಸಿದ್ದರು. ಇಂತಹ ದಾನಿಗಳಲ್ಲೂ ನಾವು ದಿನಸಿ ವ್ಯಾಪಾರಸ್ಥರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನೆರವನ್ನು ವರ್ಗಾಯಿಸಲು ಸೂಚಿಸಿದ್ದೆವು. ನಂತರ ನಮ್ಮ ಸ್ವಯಂ ಸೇವಕರ ಮೂಲಕ ವ್ಯಾಪಾರಸ್ಥರು ತಯಾರಿ ಮಾಡಿರುವ ನೀದಿದಂತಹ ಆಹಾರ ಕಿಟ್ ಗಳನ್ನು ನಾವು ವಿತರಿಸಿದ್ದೆವು. ಹೀಗೆ ಟಿವಿ ಲೈವ್ ಶೋ ಮೂಲಕ ಆರಂಭಿಸಿದ ಅಭಿಯಾನವೊಂದಕ್ಕೆ ಅನೀರೀಕ್ಷಿತ ಜನಬೆಂಬಲ ದೊರೆತದ್ದು ಇದೇ ಮೊದಲ ಬಾರಿ ಎಂದು ಹೇಳಲು ಹೆಮ್ಮೆ ಪಡುತ್ತೇವೆ.
ನಿರಂತರ ವಾಗಿ ಕರೆಗಳು ಬಂದ ಕಾರಣ , ನಮ್ಮ ದೂರವಾಣಿ ಸಂಖ್ಯೆಗಳು ಸತತವಾಗಿ ಕಾರ್ಯನಿರತರಾಗಿದ್ದರಿಂದ ನಮಗೆ ಇನ್ನೂ ಅಸಂಖ್ಯಾತ ಕರೆಗಳನ್ನು ಆಲಿಸಲು ಸಾಧ್ಯವಾಗಲಿಲ್ಲ. ದಿನವೊಂದಕ್ಕೆ ಸಾವಿರಾರು ಸಂದೇಶಗಳು ವಾಟ್ಸಾಪ್ ಮೂಲಕ ಲಭಿಸಿದ್ದರಿಂದ ಎಲ್ಲಾ ಸಂದೇಶಗಳಿಗೆ ಮರು ಉತ್ತರ ನೀಡುವುದು ಅಸಾಧ್ಯವಾಗಿತ್ತು. ಇದರಿಂದಾಗಿ ನಮ್ಮನ್ನು ಸಂಪರ್ಕಿಸಿದ ಕೆಲವರ ಸಂಪರ್ಕ ನಮಗೆ ಸಾಧ್ಯವಾಗಲಿಲ್ಲ ಎಂಬ ಪಶ್ಚಾತ್ತಾಪ ನಮಗಿದೆ. ಈ ನಡುವೆ ಭೌಗೋಳಿಕ ಅಂತರದ ಸಮಸ್ಯೆ ಹಾಗೂ ಸ್ವಯಂಸೇವಕರ ಕೊರತೆ ನಮ್ಮನ್ನು ಕಾಡಿತ್ತು. ಆದರೂ 80 ಶೇಕಡಾ ಅಗತ್ಯ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವಲ್ಲಿ ನಾವು ಸಫಲರಾಗಿದ್ದೇವೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸೇರಿದ 60ಕ್ಕೂ ಹೆಚ್ಚಿನ ಸ್ವಯಂ ಸೇವಕರು, ದಾನಿಗಳು, ಸಂಘ ಸಂಸ್ಥೆಗಳ ಹಾಗೂ ಹಿತೈಶಿಗಳ ನೆರವಿನಿಂದ ಈ ಮೈಲಿಗಲ್ಲು ಸ್ಥಾಪಿಸಲು ನಮ್ಮಿಂದ ಸಾಧ್ಯವಾಯಿತು ಎಂದು ಹೇಳಲು ಈ ಸಂದರ್ಭವನ್ನು ವಿನಿಯೋಗಿಸುತ್ತೇವೆ.
ಅಭಿಯಾನದ ಕೆಲ ಮುಖ್ಯಾಂಶಗಳು :
1. ಬಳ್ಕುಂಜೆಯಲ್ಲಿ ವಾಸವಿದ್ದ 75 ವರ್ಷ ಪ್ರಾಯದ ಹಿರಿಯ ನಾಗರಿಕರೊಬ್ಬರು ಔಷಧಿ ಸಿಗದೆ ತೊಂದರೆ ಅನುಭವಿಸಿದ್ದರು. ಅವರ ಪತ್ನಿಯೂ ರೋಗಗ್ರಸ್ತರಾಗಿ ಹಾಸಿಗೆ ಹಿಡಿದಿದ್ದರು. ದೈಜಿವರ್ಲ್ಡ್ ವಾಹಿನಿಯ ನೇರ ಪ್ರಸಾರ ನಡೆಯುತ್ತಿದ್ದಂತೆ ಅವರು ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿದರು. ನೇರ ಪ್ರಸಾರದಲ್ಲಿ ಅವರ ಅಳಲನ್ನು ಕೇಳಿಕೊಂಡ ಏಳಿಂಜೆ ನಿವಾಸಿ ರಿಚರ್ಡ್ ನಮ್ಮನ್ನು ಸಂಪರ್ಕಿಸಿ ಮರುದಿನ ಬೆಳಿಗ್ಗೆ ವೃದ್ಧ ದಂಪತಿಗಳಿಗೆ ಔಷಧಿ ತಲುಪಿಸಿದ್ದರು.
2. ಅಭಿಯಾನದ ನೇರ ಪ್ರಸಾರ ನಡೆಯುತ್ತಿದ್ದಂತೆ ವ್ಯಕ್ತಿಯೋರ್ವರು ತನ್ನ ಕಂದಮ್ಮನಿಗೆ ಕುಡಿಯಲು ಹಾಲಿನ ಅಗತ್ಯವಿದೆ ಎಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ನಮ್ಮ ಕಾರ್ಯಕ್ರಮ ವೀಕ್ಷಣೆ ಮಾಡಿಕೊಂಡಿದ್ದ ಸ್ಟ್ಯಾನಿ ಅಲ್ವಾರಿಸ್ ಎಂಬವರು 30 ನಿಮಿಷಗಳೊಳಗಾಗಿ ಆ ಮಗುವಿಗೆ ಹಾಲು ತಲುಪುವಂತೆ ನೋಡಿಕೊಂಡರು.
3. ಯೆಯ್ಯಾಡಿಯ ಮನೆಯೊಂದರಲ್ಲಿ ವ್ಯಕ್ತಿಯೋರ್ವರು ಎರಡು ದಿನಗಳಿಂದ ಆಹಾರವಿಲ್ಲದೆ ಕುಳಿತಿದ್ದರು “ನಾವು ನಿಮ್ಮೊಂದಿಗೆ ’ ನೇರ ಪ್ರಸಾರಕ್ಕೆ ಕರೆ ಮಾಡಿ ತನ್ನ ದಯನೀಯ ಸ್ಥಿತಿಯನ್ನು ತೊಡಿಕೊಂಡ. ಇದೇ ಸಂದರ್ಭ ಇದೇ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಆತನ ಮನೆಯ ಮುಂಭಾಗದ ಅಪಾರ್ಟ್ ಮೆಂಟಿನಲ್ಲಿ ವಾಸವಾಗಿದ್ದ ವ್ಯಕ್ತಿಯೋರ್ವರು ತಕ್ಷಣ ಆ ವ್ಯಕ್ತಿಯನ್ನು ಭೇಟಿ ಮಾಡಿ ವಾರಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಪೂರೈಸಿದರು.
4. ಕಾರ್ಯಕ್ರಮಕ್ಕೆ ಕರೆಮಾಡಿದ ಓರ್ವ ವ್ಯಕ್ತಿ ಲಾಕ್ ಡೌನ್ ನಿಂದಾಗಿ ಕಳೆದೆರಡು ಎರಡು ದಿನಗಳಿಂದ ಕೇವಲ ನೀರಷ್ಟೇ ಕುಡಿದು ಬದುಕುತ್ತಿದ್ದೇನೆ ಎಂದು ತಿಳಿಸಿದಾಗ ದಾಯ್ಜಿವರ್ಲ್ಡ್ ವಾಹಿನಿ ವೀಕ್ಷಣೆ ಮಾಡುತ್ತಿದ್ದ ವೀಕ್ಷಕರೊಬ್ಬರು ತಕ್ಷಣ ಸ್ಪಂದಿಸಿ ಹಸಿವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಆಹಾರ ಹಾಗೂ ದಿನಸಿ ವ್ಯವಸ್ಥೆಯನ್ನು ಮಾಡಿದರು.
5. ದೈಜಿವರ್ಲ್ಡ್ ಕಾರ್ಯಕ್ರಮಕ್ಕೆ ಸ್ಪಂದಿಸಿ ವಾಮಂಜೂರಿನ 10 ಯುವಕರು ಸ್ವಂತ ಖರ್ಚಿನಲ್ಲಿ ಬಡವರಿಗೆ ದಿನಸಿ ಕಿಟ್ ಗಳನ್ನು ಹಂಚಿದರು. ತಮ್ಮ ಹೆಸರು ಹೇಳಲಿಚ್ಛಿಸದ ಈ ಯುವಕರು ಈಗಲೂ ಈ ಸೇವೆಯನ್ನು ಮುಂದುವರೆಸುತ್ತಿದ್ದಾರೆ.
6. 9ನೇ ತರಗತಿಯ ರೊವಿನಾ ಮೊರಾಸ್ ಎಂಬ ವಿದ್ಯಾರ್ಥಿನಿಯೊಬ್ಬಳು ತನ್ನ ಪೋಷಕರು ನೀಡಿದ, ಕೂಡಿಟ್ಟ ಹಣದಿಂದ 1700 ರುಪಾಯಿ ಮೌಲ್ಯದ ಅಗತ್ಯ ಔಷಧಿಗಳನ್ನು ತನ್ನದೇ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯೋರ್ವರಿಗೆ ತಲುಪಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದಳು. ವಿದ್ಯಾರ್ಥಿನಿಯ ಈ ಸೇವಾ ಮನೋಭಾವವನ್ನು ಕಂಡು ಮರುದಿನದ ನೇರ ಪ್ರಸಾರದಲ್ಲಿ ಕದ್ರಿಯ ನವೀನ್ ಎಂಬವರು ವಿದ್ಯಾರ್ಥಿನಿಗೆ ನಗದು ಬಹುಮಾನ ಘೋಷಿಸಿದರು.
7.ದಾಯ್ಜಿವರ್ಲ್ಡ್ ವಾಹಿನಿ “ನಾವು ನಿಮ್ಮೊಂದಿಗೆ” ಅಭಿಯಾನದ ಮೂಲಕ ದಾನಿಗಳ, ಸಂಘಸಂಸ್ಥೆಗಳ ಹಾಗೂ ಸಂತ್ರಸ್ತರ ನಡುವೆ ಕೊಂಡಿಯಾಗುವ ಯೋಜನೆ ಹೊಂದಿತ್ತು. ಅಗತ್ಯದ ಸಂದರ್ಭದಲ್ಲಿ ನಮ್ಮ ಕಛೇರಿಯ ಸಿಬಂಧಿಗಳೂ ದಿನಸಿ ಕಿಟ್ ಗಳನ್ನು ವಿತರಿಸಲು ತೆರಳಿದ್ದರು.
8. ಕುತ್ತಾರಿನ ಅಶೋಕ್ ಕುಮಾರ್ ಎಂಬವರು ಕೆಲಸವಿಲ್ಲದ ಕಾರಣ ಕುಟುಂಬದ ಸದಸ್ಯರೋರ್ವರಿಗೆ ಔಷಧಿ ತರಲು ಹಣವಿಲ್ಲದೆ ಕಂಗಾಲಾಗಿದ್ದರು. ನೇರ ಪ್ರಸಾರದಲ್ಲಿ ತಮ್ಮ ಅಳಲು ತೋಡಿಕೊಂಡ ತಕ್ಷಣ ಅಬುಧಾಬಿಯಲ್ಲಿ ವಾಸವಾಗಿರುವ ಮೊಹಮ್ಮದ್ ಅಲಿ ಎಂಬವರು ಅಶೋಕ್ ಖಾತೆಗೆ 10000 ವರ್ಗಾಯಿಸಿ ಅವರ ನೋವಿಗೆ ಸ್ಪಂದಿಸಿದ್ದರು.
9. ಮುಂಬಯಿನಲ್ಲಿ ವಾಸವಾಗಿರುವ ಆಲ್ವಿನ್ ಎಂಬವರು 100 ದಿನಸಿ ಕಿಟ್ ಗಳನ್ನು ನೀಡಲು ಮುಂದಾಗಿದ್ದು ವೆಚ್ಚವನ್ನು ನೇರವಾಗಿ ದಿನಸಿ ಅಂಗಡಿಗೆ ವರ್ಗಾಯಿಸಿದ್ದರು. ದೋಹ ಕತಾರಿನಲ್ಲಿರುವ ಹಾಗೂ ಆಸ್ಟ್ರೇಲಿಯಾದಲ್ಲಿರುವ ಉದ್ಯಮಿಗಳಿಬ್ಬರು ಸಮಾನವಾಗಿ 100 ದಿನಸಿ ಕಿಟ್ ಗಳಿಗೆ ಆರ್ಥಿಕ ನೆರವು ನೀಡಿದ್ದರು.
10. ಟಿವಿ ಕಾರ್ಯಕ್ರಮ ವೀಕ್ಷಿಸುತ್ತಿರುವಾಗ ಸಂತ್ರಸ್ತರ ಆಳಲು ಕೇಳಿ ಉಜಿರೆಯ ಬಡ ಮಹಿಳೆಯೊಬ್ಬಳು ಉದಾರವಾಗಿ 2000 ರುಪಾಯಿ ನೆರವು ನೀಡಲು ಮುಂದೆ ಬಂದಿದ್ದರು.
11. ನಾಲ್ವರು ದಾನಿಗಳು 100 ಕಿಲೋ ಅಕ್ಕಿ, ಎರಿಕ್ ಮಿರಾಂದ ಎಂಬವರು 170 ತೆಂಗಿನ ಕಾಯಿ, ಬೊನಿಫಾಸ್ ಮಿನೇಜಸ್ 100 ತೆಂಗಿನ ಕಾಯಿ, ಹಾಗೂ ಹೆಸರು ಹೇಳಲು ಇಚ್ಚಿಸದ ದಾನಿಯೋರ್ವರು 50 ತೆಂಗಿನ ಕಾಯಿಗಳನ್ನು ನೀಡಲು ಮುಂದೆ ಬಂದಿದ್ದಾರೆ. ಈ ತೆಂಗಿನ ಕಾಯಿಗಳನ್ನು ದಿನವೊಂದಕ್ಕೆ 2000 ನಿರಾಶ್ರಿತರಿಗೆ ಆಹಾರ ವಿತರಿಸುವ ವೈಡ್ ಡಾವ್ಸ್ ಸಂಸ್ಥೆಗೆ ನೀಡಲು ತೀರ್ಮಾನಿಸಿದ್ದೇವೆ.
12. “ನಾವು ನಿಮ್ಮೊಂದಿಗೆ’ ಅಭಿಯಾನಕ್ಕೆ ದೊರೆತ ಸ್ಪಂದನೆಯನ್ನು ಗಮನಿಸಿ ನಮ್ಮೊಂದಿಗೆ ಕೈಜೋಡಿಸಿದ ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರು ತಮ್ಮ ಪಕ್ಷದ ಕಾರ್ಯಕರ್ತರ ಮೂಲಕ ಉಚಿತ ಕಿಟ್ ಗಳನ್ನು ವಿತರಿಸಿದ್ದರು ಹಾಗೂ ನೇರಪ್ರಸಾರದಲ್ಲಿ ಆಲಿಸಿದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಿದ್ದರು.
13. ಆಲ್ಟ್ ಮೇಡ್ ಎಂಬ ಸಂಸ್ಥೆಯ ಮೂಲಕ ಅಗತ್ಯದ ಔಷಧಿಗಳನ್ನು ತಲುಪಿಸುವಲ್ಲಿ ಯಶಸ್ಸನ್ನು ಕಂಡಿದ್ದೇವೆ.
14. ಎಂಆರ್ ಪಿ ಎಲ್ ಸಂಸ್ಥೆಯ ಸ್ಟಾಪ್ ಅಸೋಸಿಯೇಷನ್ ನಮ್ಮ ಅಭಿಯಾನಕ್ಕೆ ಕೈ ಜೋಡಿಸಿದ್ದು ದಾಯ್ಜಿವರ್ಲ್ಡ್ ನೇರ ಪ್ರಸಾರದ ಮೂಲಕ 200 ಬಡ ಕುಟುಂಬಗಳಿಗೆ ನೆರವು ನೀಡಿದೆ.
15. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಮೂಡಬಿದ್ರಿ ಶಾಸಕ ಉಮನಾಥ್ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ಮಂಗಳೂರು ಶಾಸಕ ಯುಟಿ ಖಾದರ್, ಮಂಗಳೂರು ದಕ್ಷಿಣ ಶಾಸಕ, ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಶಾಸಕ ಜೆ ಆರ್ ಲೋಬೊ ನಮ್ಮ ವಾಹಿನಿಯ ನೇರಪ್ರಸಾರ ಕಾರ್ಯಕ್ರಮಗಳಲ್ಲಿ ಭಾವಹಿಸಿ ಜನರ ಸಮಸ್ಯೆ ಆಲಿಸಿ ನೇರವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದರು.
16. ನನ್ನೊಂದಿಗೆ ಚೇತನ್ ಕುಮಾರ್ ಶೆಟ್ಟಿ ಅವರು ಕರೆ ಮಾಡಿದವರ ಅನುಕೂಲಕ್ಕಾಗಿ ಕನ್ನಡ, ತುಳು ಭಾಷೆಗಳಲ್ಲಿ ಕಾರ್ಯಕ್ರಮ ನಿರೂಪಿಸಿದ್ದರು. ನಾನು ಹಾಗೂ ಲೆಸ್ಲಿ ರೇಗೋ ವಿಶೇಸ್ ಕೊಂಕಣಿ ಭಾಷೆಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಸಿಕೊಟ್ಟು ಬಡ ಜನರನ್ನು ನೇರವಾಗಿ ತಲುಪುವಲ್ಲಿ ಪ್ರಯತ್ನಪಟ್ಟಿದ್ದೆವು.
ನಮ್ಮೊಂದಿಗೆ ಸಹಕರಿಸಿದ ದಾನಿಗಳ ಹಾಗೂ ಸಂಘ ಸಂಸ್ಥೆಗಳ ಹೆಸರು ಈ ಕೆಳಗಿನಂತಿದೆ.
1.ಉಮಾನಾಥ್ ಕೋಟ್ಯಾನ್, ಶಾಸಕರು,
2.ವೇದವ್ಯಾಸ್ ಕಾಮತ್, ಶಾಸಕರು
3.ಹರೀಶ್ ಪೂಂಜ, ಶಾಸಕರು
4. ಯು ಟಿ ಖಾದರ್, ಶಾಸಕರು
5. ವೈ ಭರತ್ ಶೆಟ್ಟಿ, ಶಾಸಕರು
6. ಐವನ್ ಡಿ ಸೋಜಾ, ಶಾಸಕರು
7. ಮಿಥುನ್ ರೈ
8. ಉದಯ್ ಪೂಜಾರಿ- ಬಿರುವೆರ್ ಕುಡ್ಲ
9. ಕೊರಿನ್ ರಸ್ಕೀನ್ಹಾ-ವೈಟ್ ಡಾವ್ಸ್, ಮಂಗಳೂರು
10. ವಿಜಯ ಗೇಮ್ಸ್ ಟೀಮ್, ತೊಕ್ಕೊಟು
11. ಹನೀಫ-ಹಿದಾಯತ್ ಫೌಂಡೇಶನ್
12. ಮ್ಯಾನೇಜ್ ಮೆಂಟ್ ಸ್ಟಾಫ್ ಅಸೋಸಿಯೇಶನ್- ಎಂ.ಆರ್.ಪಿ.ಎಲ್
13. ರೊನಾಲ್ಡ್ ಗೋಮ್ಸ್, ಡಿಸ್ಟ್ರಿಕ್ಟ್ ಗವರ್ನರ್-ಲಯನ್ಸ್ ಕ್ಲಬ್, ಮಂಗಳೂರು
14. ಬೇಬಿ ಕುಂದರ್, ಬಂಟ್ವಾಳ
15. ರೋಲ್ಫಿ ಡಿ ಕೋಸ್ತಾ, ಅಧ್ಯಕ್ಷರು, ಕಥೋಲಿಕ್ ಸಭಾ, ಮಂಗಳೂರು
16. ಎಂ ಫ್ರೆಂಡ್ಸ್, ದಕ್ಷಿಣ ಕನ್ನಡ
17. ಸೈಫ್ ಸುಲ್ತಾನ್ ಹಾಗೂ ತಂಡ
18. ವೀರ ಕೇಸರಿ ಶ್ರಮಿಕ ಸಂಘ, ಬೆಳ್ತಂಗಡಿ
19. ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಮಂಜೇಶ್ವರ
20. ಆಸೀಫ್ - ಬಿ ಹ್ಯೂಮನ್, ದಕ್ಷಿಣ ಕನ್ನಡ
21. ರೋಟರಿ ಕ್ಲಬ್, ಕೊಲ್ಯ
22. ಫ್ರ್ಯಾಂಕಿ, ಜೆಸಿಐ, ದೇರಳಕಟ್ಟೆ
23. ಸ್ಟ್ಯಾನಿ ಬಾರೆಟ್ಟೊ, ಫಳ್ನೀರ್
24. ಮಧು ಜೀವನ್ ಸೌದಿ ಅರೇಬಿಯಾ
25. ಸಂತೋಸ್ ಎರೇಂಜರ್ಸ್
26.ಕುಸುಮಾಕರ್-ಯುವವಾಹಿನಿ ಕೊಲ್ಯ ಘಟಕ
27.ಆಕ್ಷಿತ್ ಸುವರ್ಣ, ಜೆಡಿಎಸ್
28.ಆರ್ಶದ್ ಹಾಗೂ ತಂಡ, ಮೂಡಬಿದ್ರಿ
29. ನೀಲೇಶ್ ಲೋಬೊ, ಕುಲ್ಶೇಕರ್
30. ಪ್ರೀತಮ್ ನೊರೋನ್ಹಾ, ಫಜೀರ್
31. ಕಥೋಲಿಕ್ ಸಭಾ, ಫಜೀರ್ ಘಟಕ
32. ರಾಯನ್, ಕಿನ್ನಿಗೋಳಿ
33. ಲವೀನ, ಕುಲಶೇಖರ
34. ಅಬಿಗೈಲ್, ಉಡುಪಿ
35. ಡ್ಯಾರೆಲ್ ತಾವ್ರೊ, ಬೊಕ್ಕಪಟ್ಣ
36. ರೊವಿನಾ ಮೊರಾಸ್
37. ಕಿರಣ್, ಮೇರಿಹಿಲ್
38. ಸಿದ್ಧೀಕ್ ತಲಪಾಡಿ
39. ಸುನಿಲ್ ಆಳ್ವಾ, ಕಾಪು
40. ಸ್ವರ್ಣ ಸಂಜೀವಿನಿ
41. ನವೀನ್ ಡಿ ಸೋಜಾ, ಕತಾರ್
42. ಜೆಫ್ರಿ ಕಿನ್ನಿಗೋಳಿ
43. ರಿಚರ್ಡ್ , ಏಳಿಂಜೆ
44. ವಿಜಯ್, ಕುದ್ರೋಳಿ
45. ಸುನಿಲ್ ಬಜಾಲ್
46. ಗುಡ್ ಸಮಾರಿತನ್, ವಾಮಂಜೂರ್
47. ವಾಲ್ಟರ್ ಮೊಂತೆರೊ, ಬೆಳ್ಮಣ್
48. ಅರ್ಜುನ್- ಆಲ್ಟ್ ಮೆಡ್, ಮಂಗಳೂರು
49. ಟ್ರಿನಿಟಾ, ಪೆರ್ಮನ್ನೂರು
50.ರೋಶನ್, ಅಮ್ಮೆಂಬಳ್
51.ಗುರುದತ್ತ್ ಸ್ಟೋರ್, ಯೆಯ್ಯಾಡಿ
52. ರೇಗೊ ಸ್ಟೋರ್, ಬೆಂದೂರು
53. ಲೆಸ್ಲಿ ರೇಗೊ ಹಾಗೂ ತಂಡ, ಮಂಗಳೂರು
54. ಗಣೇಶ್ ರಾವ್, ಸ್ಥಾಪಕರು, ಕರಾವಳಿ ಕಾಲೇಜು
55.ಗೋಲ್ಡಿ ವಾಲೆನ್ಶಿಯಾ
ಹಾಗೂ ಮುಂತಾದವರು
ಈ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ನಮ್ಮೊಂದಿಗೆ ಸಹಕರಿದ ಎಲ್ಲಾ ದಾನಿಗಳಿಗೆ, ಸಂಘ ಸಂಸ್ಥೆಗಳಿಗೆ, ಸ್ವಯಂ ಸೇವಕರಿಗೆ ಧನ್ಯವಾದದ ನುಡಿಗಳನ್ನಾಡುವುದು ನನ್ನ ಕರ್ತವ್ಯ. ಈ ನಡುವೆ ಅಚಾತುರ್ಯದಿಂದ ಹೆಸರುಗಳು ಬಿಟ್ಟು ಹೋದಲ್ಲಿ ಬೇಷರತ್ ಕ್ಷಮೆ ಕೋರುತ್ತೇನೆ. ”ನಾವು ನಿಮ್ಮೊಂದಿಗೆ’ ಅಭಿಯಾನಕ್ಕಾಗಿ ನಮ್ಮ ಬಳಗವು ದಿನ-ರಾತ್ರಿ ಶ್ರಮಿಸಿದೆ. ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಪ್ರೊಡಕ್ಷನ್ ಡೈರೆಕ್ಟರ್ ಆಶಿತ್ ಪಿಂಟೊ, ಬ್ಯೂರೋ ಚೀಫ್ ಸ್ಟ್ಯಾನಿ ಬೇಳಾ , H R ಡೈರೆಕ್ಟರ್ ರೊನಾಲ್ಡ್ ನಜ್ರೆತ್ ಅವರ ಸೇವೆಯನ್ನು ಪ್ರತ್ಯೇಕ ಸ್ಮರಿಸುತ್ತೇನೆ.
ಮುಂದೆ ಅಗತ್ಯ ಕಂಡುಬಂದಲ್ಲಿ ನಾವು ನಮ್ಮ ವಾಹಿನಿಯ ಮೂಲಕ ಅಭಿಯಾನದ ಎರಡನೇ ಹಂತವನ್ನು ಆರಂಭಿಸಲಿದೆ. ತುರ್ತು ಸಂದರ್ಭಗಳಲ್ಲಿ ನೀವು ನಮ್ಮನ್ನು ನಮ್ಮ ವಾಟ್ಸಾಪ್ ಸಂಖ್ಯೆ 8217466588 (ಕರೆ ನಿಷಿದ್ಧ) ಮೂಲಕ ಸಂಪರ್ಕಿಸಬಹುದು. ಮತ್ತೊಮ್ಮೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.