ಮಂಗಳೂರು, ಏ 13 (DaijiworldNews/SM): ರಾಜ್ಯದಲ್ಲಿರುವ ಕಾರ್ಮಿಕರಿಗೆ ಸರಕಾರದಿಂದ ಗುಡ್ ನ್ಯೂಸ್ ದೊರಕಿದೆ. ಕೋವಿಡ್ ಸೋಂಕಿನಿಂದ ದೇಶದಲ್ಲಿ ಲಾಕ್ ಡೌನ್ ಆಗಿದ್ದು, ಈ ಸಂದರ್ಭದಲ್ಲಿ ದೇಶದೆಲ್ಲೆಡೆ ಖಾಸಗಿ ಸಂಸ್ಥೆ, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ಮನೆಯಲ್ಲೆ ಉಳಿಯುವಂತಾಗಿದ್ದು, ಕೆಲಸದ ಭದ್ರತೆ ಹಾಗೂ ವೇತನದ ಆತಂಕ ಎದುರಾಗಿದೆ.
ಯಾವುದೇ ಕಾರಣಕ್ಕೂ ರಜೆಯಲ್ಲಿರುವ ಕಾರ್ಮಿಕರ ವೇತನ ಕಡಿತ ಮಾಡಬಾರದು ಎಂಬುವುದಾಗಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕ್ಯಾ. ಮಣಿವಣ್ಣನ್ ಆದೇಶ ಹೊರಡಿಸಿದ್ದಾರೆ. ಯಾವುದೇ ಕಾರಣಕ್ಕೂ ರಜೆಯಲ್ಲಿರುವ ಕಾರ್ಮಿಕರನ್ನು ವಜಾಗೊಳಿಸುವಂತಿಲ್ಲ ಎಂಬುವುದಾಗಿ ಸರಕಾರದ ಮುಖ್ಯಕಾರ್ಯದರ್ಶಿಯಿಂದ ಖಡಕ್ ವಾರ್ನಿಂಗ್ ನೀಡಲಾಗಿದೆ.
ರಜೆಯಲ್ಲಿರುವ ಕಾರ್ಮಿಕರಿಗೆ ವೇತನ ನೀಡಬೇಕು. ರಜೆಯಲ್ಲಿದ್ದರೂ ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸಬೇಕು. ನಿಯಮ ಉಲ್ಲಂಘಿಸುವ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಎಚ್ಚರಿಕೆ ನೀಡಿದ್ದಾರೆ.