ಮಂಗಳೂರು, ಎ.13 (DaijiworldNews/PY) : ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅನುಮೋದನೆಯ ಅನುಗುಣವಾಗಿ ಕರ್ನಾಟಕ ಬ್ಯಾಂಕ್ನ ನಿರ್ದೇಶಕರ ಮಂಡಳಿಯು ಮಹಾಬಲೇಶ್ವರ ಎಂ.ಎಸ್. ಅವರನ್ನು ಮತ್ತೆ ನೇಮಕ ಮಾಡಿದೆ.ಪಿ.ಜಯರಾಮ ಭಟ್ ಅವರು ಎ.13ರವರೆಗೆ ಅರೆಕಾಲಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ. ಮಹಾಬಲೇಶ್ವರ ಅವರು ಎ.15ರಿಂದ ಜಾರಿಗೆ ಬರುವಂತೆ 3 ವರ್ಷಗಳ ಕಾಲ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈ ಮಹಾನ್ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದು, 3 ವರ್ಷಗಳ ಕಾಲ ಅವಧಿ ಪಡೆದಿರುವುದ ನನಗೆ ಗೌರವದ ವಿಷಯವಾಗಿದೆ. ನನ್ನ ಮಾರ್ಗದರ್ಶಕ ಹಾಗೈ ಕರ್ನಾಟಕ ಬ್ಯಾಂಕ್ನ ಪ್ರಸ್ತುತ ಅಧ್ಯಕ್ಷರಾದ ಪಿ.ಜಯರಾಮ ಭಟ್ ಅವರನ್ನು ಮತ್ತೆ ಒಂದೂವರೆ ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ನನ್ನ ಅವಧಿಯಲ್ಲಿ ನಾನು ನೀಡಿದ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಪಿ ಜಯರಾಮ ಭಟ್ ಮತ್ತು ಎಲ್ಲಾ ನಿರ್ದೇಶಕರ ಮಂಡಳಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.
ಬ್ಯಾಂಕ್ಗಳು 10 ಮಿಲಿಯನ್ ಗ್ರಾಹಕರೊಂದಿಗೆ ನಿಷ್ಠೆ ಹಾಗೂ 8500 ಬದ್ದ ಕಾರ್ಯಪಡೆಯ ಬೆಂಬಲಕ್ಕಾಗಿ ನನ್ನ ಕೃತಜ್ಞತೆಗಳು. ಇಂದು ನಾವು ನೋಡುವಂತೆ ಭಾರತೀಯ ಬ್ಯಾಂಕ್ ಉದ್ಯಮದಲ್ಲಿ ಶ್ಲಾಘನೀಯ ಸ್ಥಾನವನ್ನು ಸಾಧಿಸಲು ಬ್ಯಾಂಕ್ ಅನುವು ಮಾಡಿಕೊಟ್ಟಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಮೂಲ್ಯವಾದ ಮಾರ್ಗದರ್ಶನ ಹಾಗೂ ಬ್ಯಾಂಕ್ನ ಬೆಳವಣಿಗೆಯಲ್ಲಿ ಷೇರುದಾರರ ಬೆಂಬಲವನ್ನು ನಾನು ಕೃತಜ್ಞತೆಯಿಂದ ಅಂಗೀಕರಿಸುತ್ತೇನೆ ಎಂದರು.
ಇಡೀ ಜಗತ್ತು ಕೊರೊನಾ ಭೀತಿಯಿಂದ ಅಭೂತಪೂರ್ವ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಅಲ್ಲದೇ, ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ ಕರ್ನಾಟಕ ಬ್ಯಾಂಕ್ ಈಗ ಈ ಸವಾಲುಗಳನ್ನು ಎದುರಿಸಲು ಉತ್ತಮವಾಗಿ ಸಿದ್ಧವಾಗಿದೆ ಎಂದು ನನಗೆ ವಿಶ್ವಾಸವಿದೆ, ಏಕೆಂದರೆ ನಾವು ವಿವಿಧ ರೂಪಾಂತರ ಉಪಕ್ರಮಗಳೊಂದಿಗೆ ದೊಡ್ಡದಾಗಿ ಮತ್ತು ಬಲವಾಗಿ ಬೆಳೆದಿದ್ದೇವೆ. ಕಾರ್ಪೊರೇಟ್ ಆಡಳಿತ ಮತ್ತು ವ್ಯವಹಾರದ ಮಾನದಂಡಗಳ ಎಲ್ಲ ಅಂಶಗಳಲ್ಲೂ ಬ್ಯಾಂಕನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ದೃಢ ನಿಶ್ಚಯವನ್ನು ಹೊಂದಿದ್ದೇವೆ. ಹಾಗಾಗಿ ಎಲ್ಲಾ ಮಧ್ಯಸ್ಥಗಾರರಿಗೆ ಮೌಲ್ಯ ರಚನೆ ಮತ್ತು ಕರ್ನಾಟಕ ಬ್ಯಾಂಕ್ ಅನ್ನು ದೊಡ್ಡ, ಬಲವಾದ ಬ್ಯಾಂಕ್ ಮಾಡುವ ಪ್ರಕ್ರಿಯೆಯಲ್ಲಿ ಕೇಂದ್ರೀಕರಿಸಿದ್ದೇವೆ. ಈ ಪ್ರಯಾಣವನ್ನು ಅತ್ಯಾಕರ್ಷಕ, ಲಾಭದಾಯಕ ಮತ್ತು ಸ್ಮರಣೀಯವಾಗಿಸಲು ಎಲ್ಲಾ ಪಾಲುದಾರರ ನಿರಂತರ ಬೆಂಬಲವನ್ನು ನಾನು ಬಯಸುತ್ತೇನೆ ಎಂದು ಹೇಳಿದರು.