ಪಡುಬಿದ್ರೆ, ಏ 14 (Daijiworld News/MSP): ಮನೆಯವರು ಬುದ್ದಿವಾದ ಹೇಳಿದ್ದರೆಂದು ಮನನೊಂದು 13 ವರ್ಷದ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿ-ಅದಮಾರು ದರ್ಕಸ್ ಸೀತಾರಾಮ ನಿವಾಸ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು ಜಯರಾಮ ಎಂಬವರ ಪುತ್ರಿ ಪಡುಬಿದ್ರಿಯ ಲಯನ್ಸ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಶ್ರೀಜನ್ಯಾ (13) ಎಂದು ಗುರುತಿಸಲಾಗಿದೆ.
ಮನೆಯಲ್ಲಿದ್ದು ಅತಿಯಾಗಿ ಮೊಬೈಲ್ ನೋಡುತ್ತಿರುವುದನ್ನು ಗಮನಿಸಿದ ಪೋಷಕರು ,ಜಾಸ್ತಿ ಮೊಬೈಲ್ ನೋಡುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದರಿಂದ ಮನನೊಂದು ಕೋಣೆಯೊಳಗೆ ಕಬ್ಬಿಣದ ಸಲಾಕೆಗೆ ಚೂಡಿದಾರದ ಶಾಲನ್ನು ಕಟ್ಟಿ ನೇಣಿಗೆ ಶರಣಾಗಿದ್ದಾಳೆ.
ಮನೆಯವರು ತಕ್ಷಣ ಗಮನಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಘೋಷಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.