ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಾನಾ ಕಸರತ್ತು ಮಾಡುತ್ತಿವೆ ರಾಜಕೀಯ ಪಕ್ಷಗಳು. ಯಾತ್ರೆಗಳಲ್ಲಿ, ಮತದಾರರ ಒಲೈಕೆಯಲ್ಲಿ ಬ್ಯುಸಿಯಾಗಿದ್ದಾಗ ಹಲವು ಪಕ್ಷಗಳ ನಡುವೆ ಪ್ರಜಾಕೀಯ ಪಕ್ಷ ಘೋಷಣೆ ಮಾಡಿದಂತೆ ಕಳೆದು ಹೋಯಿತೆ ? ಎಂದು ಅನುಮಾನಗಳು ಕಾಡಲಾರಂಭಿಸಿತ್ತು. ಆದರೆ ಪ್ರಜಾಕೀಯ ಪಕ್ಷ ಬಹಳ ಸೈಲೆಂಟ್ ಆಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತದೆ. ಕಾರಣ ನಟ ಉಪೇಂದ್ರ ಟ್ವಿಟರ್ನಲ್ಲಿ ಪಕ್ಷ ಬಹುದೊಡ್ಡ ಹೆಜ್ಜೆ ಇಡುವ ಮುನ್ಸೂಚನೆ ನೀಡಿದ್ದಾರೆ.
ಹೌದು ಈವರೆಗೂ ಮೌನ ವಹಿಸಿದ್ದ ನಟ ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷ ಟ್ವಿಟರ್ ಮೂಲಕ ತಾವೂ ಮಹತ್ವದ ಹೆಜ್ಜೆಯನ್ನಿರಿಸುವ ಸುಳಿವು ನೀಡಿದ್ದಾರೆ. ಆದರೆ ಅವರೇನು ಮಾಡಲಿದ್ದಾರೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತಾಗಿ ತಮ್ಮ ಟ್ವಿಟರ್ ಪೇಜ್ನಲ್ಲಿ ಬರೆದುಕೊಂಡಿರುವ ಉಪ್ಪಿ "ಪ್ರಜಾಕೀಯ ಮತ್ತು ರಾಜಕೀಯದ ಬಹು ದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ ದಯವಿಟ್ಟು ಕಾದು ನೋಡಿ" ಬರೆದುಕೊಂಡಿದ್ದಾರೆ.