ಮಂಗಳೂರು, ಎ.15 (Daijiworld News/MB) : ಮಂಗಳೂರು ಮೂಲದ ಯುವಕನೋರ್ವ ಕುವೈಟ್ನಲ್ಲಿ ಎಪ್ರಿಲ್ 9 ರಂದು ಮೃತಪಟ್ಟಿದ್ದು ಅವರ ಮೃತದೇಹವು ಏಪ್ರಿಲ್ 15 ರಂದು ಬೆಂಗಳೂರಿಗೆ ತಲುಪುವ ನಿರೀಕ್ಷೆಯಿದೆ. ಆ ಬಳಿಕ ಅಲ್ಲಿಂದ ಮಂಗಳೂರಿಗೆ ರವಾನಿಸಲಾಗುವುದು.
ಮೃತ ಯುವಕ ಪ್ರಕ್ಯಾತ್ (30) ಅವರನ್ನು ಈ ಹಿಂದೆ ಫರ್ವಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಐಸಿಯುಗೆ ವರ್ಗಾವಣೆ ಮಾಡಲಾಗಿತ್ತು.
ಮೃತ ಯುವಕ ಮಂಗಳೂರಿನ ಚಿಲಿಂಬಿ ನಿವಾಸಿಗಳಾದ ಚಂದ್ರಕಾಂತ್ ಮತ್ತು ಶೋಭಾ ಅವರ ಹಿರಿಯ ಪುತ್ರನಾಗಿದ್ದು ಕುವೈಟ್ನಲ್ಲಿ ಬ್ರಿಟಿಷ್ ಏರ್ವೇಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.