ಮಂಗಳೂರು, ಎ.15 (Daijiworld News/MB) : ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದ್ದು ಈ ಸಂದರ್ಭದಲ್ಲಿ ಅಗತ್ಯವಾದ ಜನೌಷಧಿ ಕೇಂದ್ರಗಳು ತೆರೆದಿರಬೇಕೆಂದು ಆದೇಶಿಸಲಾಗಿದೆ. ಆದರೆ ಆದೇಶಕ್ಕೂ ಕ್ಯಾರೇ ಅನ್ನದ ಜನೌಷಧಿ ಕೇಂದ್ರದ ನಿರ್ವಾಹಕರು ಕೇಂದ್ರವನ್ನು ಬಂದ್ ಮಾಡಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಮಾಲ್ ಮೊದಲಾದವುಗಳನ್ನು ಬಂದ್ ಮಾಡಲು ಆದೇಶಿಸಲಾಗಿದ್ದು ಈ ಸಂದರ್ಭದಲ್ಲಿ ಜನರಿಗೆ ಅಗತ್ಯವಾದ ಜನೌಷಧಿ ಕೇಂದ್ರಗಳು ನಿತ್ಯ ಮುಂಜಾನೆ ಏಳು ಗಂಟೆಗೆ ತೆರೆದಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿದ್ದಾರೆ. ಆದರೆ ಉಸ್ತುವಾರಿ ಸಚಿವರ ಮಾತಿಗೂ ಜನೌಷಧಿ ಕೇಂದ್ರದ ನಿರ್ವಾಹಕರು ಕವಡೆ ಕಾಸಿನ ಬೆಲೆ ನೀಡಿಲ್ಲ.
ಮಂಗಳೂರಿನ ಲೇಡಿಗೋಷನ್, ವೆನ್ಲಾಕ್, ಅತ್ತಾವರ, ಕಂಕನಾಡಿಯಲ್ಲಿರುವ ಜನೌಷಧಿ ಕೇಂದ್ರಗಳು ಇನ್ನೂ ಕೂಡಾ ಮುಚ್ಚಲಾಗಿದೆ.