ಕಾರ್ಕಳ, ಏ 15 (Daijiworld News/MSP): ನಗರದ ಅತ್ತೂರು ಕ್ರಾಸ್ ರಸ್ತೆಯಲ್ಲಿರುವ ರೋಟರಿ ಕಾಲೋನಿಯ ಮನೆಯ ಮೇಲ್ಚಾವಣಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ತನ್ನ ಮರ್ಮಾಂಗ ಪ್ರದರ್ಶಿಸಿದ ಅಮಾನವೀಯ ಘಟನೆ ನಡೆದಿದೆ. ಕಾಬೆಟ್ಟು ಎಸಿ ರೋಡ್ ನಿವಾಸಿ ಶ್ರೀನಿವಾಸ ಪೈ ಪ್ರಕರಣದ ಆರೋಪಿ.
ಮಹಿಳೆ ಮೇಲ್ಚಾವಣೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಆರೋಪಿ ಶ್ರೀನಿವಾಸ ಪೈ ಜೋಕಾಲಿಯಲ್ಲಿ ಕುಳಿತುಕೊಂಡು ಆತನು ಧರಿಸಿದ್ದ ಲುಂಗಿಯನ್ನು ಸರಿಸಿ ಆತನ ಮರ್ಮಾಂಗವನ್ನು ತೋರಿಸಿರುವ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.