ಕಾಸರಗೋಡು, ಏ 15 (DaijiworldNews/SM): ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಸೋಂಕಿನಿಂದ ಮುಕ್ತರಾದವರ ಸಂಖ್ಯೆ 48 ಕ್ಕೇರಿದೆ. ಆದರೆ ಜಿಲ್ಲೆಯಲ್ಲಿ ಬುಧವಾರದಂದು ಯಾವುದೇ ಹೊಸ ಪ್ರಕರಣಗಳು ಕಂದುಬಂದಿಲ್ಲ.
ಜಿಲ್ಲೆಯಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗಿದ್ದು, ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿರುವುದು ನೆಮ್ಮದಿಯನ್ನುಂಟು ಮಾಡಿದೆ. ಬುಧವಾರ ಕೇರಳದಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ಕಾಸರಗೋಡಿನಲ್ಲಿ ಹೊಸ ಪ್ರಕರಣ ದೃಢಪಟ್ಟಿಲ್ಲ.
ಮಂಗಳವಾರ ಕೇರಳದಲ್ಲಿ ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಕಾಸರಗೋಡು ಜಿಲ್ಲೆಯ ಚೆಂಗಳ ನಿವಾಸಿಯೋರ್ವರಲ್ಲಿ ಸೋಂಕು ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಇದುವರೆಗೆ 83 ಮಂದಿ ಗುಣಮುಖರಾಗಿದ್ದು, ಇನ್ನು 84 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು 608 ಮಂದಿಯ ಸ್ಯಾಂಪಲ್ ವರದಿ ಲಭಿಸಬೇಕಿದೆ. ಐಸೋಲೇಷನ್ ವಾರ್ಡ್ ಗಳಲ್ಲಿ 137 ಮಂದಿ ನಿಗಾದಲ್ಲಿದ್ದಾರೆ.