ಮಂಗಳೂರು, ಏ 15(DaijiworldNews/SM): ದೇಶದೆಲ್ಲೆಡೆ ಕೊರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತಿದ್ದು, ಈ ನಡುವೆ ಸೋಂಕಿತರು ಹೆಚ್ಚಿರುವ ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಕೇಂದ್ರ ಸರಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಅದರ ಅನ್ವಯ ಈ ಎಂಟು ಜಿಲ್ಲೆಗಳಲ್ಲಿ ಲಾಕ್ ಡೌನ್ ಕಠಿಣವಾಗಿರಲಿದೆ ಎಂದು ಸರಕಾರ ತಿಳಿಸಿದೆ. ಇನ್ನು ಉಡುಪಿ ಜಿಲ್ಲೆ ಸೇರಿದಂತೆ ಹನ್ನೊಂದು ಜಿಲ್ಲೆಗಳನ್ನು ನಾನ್ ಹಾಟ್ ಸ್ಪಾಟ್ ಜಿಲ್ಲೆಗಳೆಂದು ಗುರುತಿಸಲಾಗಿದೆ.
ಹಾಟ್ ಸ್ಪಾಟ್ ವಿಧಿಸಿರುವ ಜಿಲ್ಲೆಗಳು:
ದಕ್ಷಿಣ ಕನ್ನಡ
ಬೆಂಗಳೂರು ನಗರ
ಮೈಸೂರು
ಬೆಳಗಾವಿ
ಬೀದರ್
ಕಲಬುರಗಿ
ಬಾಗಲಕೋಟೆ
ಧಾರವಾಡ
ನಾನ್ ಹಾಟ್ ಸ್ಪಾಟ್ ಜಿಲ್ಲೆಗಳು:
ಉಡುಪಿ
ಉತ್ತರ ಕನ್ನಡ
ಬಳ್ಳಾರಿ
ಮಂಡ್ಯ
ಬೆಂಗಳೂರು ಗ್ರಾಮಾಂತರ
ದಾವಣೆಗೆರೆ
ಗದಗ
ತುಮಕೂರು
ಕೊಡಗು
ವಿಜಯಪುರ
ಚಿಕ್ಕಬಳ್ಳಾಪುರ
ಇನ್ನು ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದ ಉಳಿದ 11 ಜಿಲ್ಲೆಗಳನ್ನು ಗ್ರೀನ್ ಜೋನ್ ಎಂದು ಘೋಷಿಸಲಾಗಿದೆ.