ಬೆಳ್ಮಣ್ ಏ15(Daijiworld News/MSP) : ಕರೋನದಿಂದ ದೇಶಾದ್ಯಂತ ಲಾಕ್ ಡೌನ್ ಹಿನ್ನಲೆ ಉಡುಪಿ ಜಿಲ್ಲೆಯಾದ್ಯಂತ ಗಡಿ ಪ್ರದೇಶಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು ಬೆಳ್ಮಣ್ ಚೆಕ್ ಪೋಸ್ಟ್ ನಲ್ಲಿ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಯುತ್ತಿದೆ. ಹಾಗೂ ಬಿಗಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹೊರಜಿಲ್ಲೆಗಳಿಂದ ಬರುವ ಬಹುತೇಕ ವಾಹನಗಳನ್ನು ಗಡಿ ದಾಟದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದು. ಜಿಲ್ಲೆಯ ಒಳ ಪ್ರವೇಶಿದಂತೆ ವಾಹನಗಳನ್ನು ತಪಾಸಣೆ ನಡೆಸಿ ವಾಪಸ್ಸು ಹಿಂದೆ ಕಳುಹಿಸಲಾಗುತ್ತಿದೆ. ಅನಾರೋಗ್ಯ ಹಾಗೂ ತುರ್ತು ಸಂದರ್ಭದಲ್ಲಿ ಮಾತ್ರ ವಾಹನಗಳಿಗೆ ಹೋಗಲು ಅವಕಾಶವನ್ನು ಮಾಡಲಾಗುತ್ತದೆ.
ಅರೋಗ್ಯ ತಪಾಸಣೆ : ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ವಾಹನಗಳ ಪ್ರಯಾಣಿಕರನ್ನು ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಪರೀಕ್ಷೆಯನ್ನು ನಡೆಸಿ ಮತ್ತೆ ಹಿಂದೆ ಕಳುಹಿಸುತ್ತಿದ್ದಾರೆ. ಬುಧವಾರವೂ ಮಂಗಳೂರಿನ ಕೋಡಿಯಲ್ ನಿಂದ ಬಂದ ಟ್ಯಾಂಕರ್ ವೊಂದರಲ್ಲಿ ೬ ಮಂದಿ ಬಿಜಾಪುರಕ್ಕೆ ತೆರಳುವ ಯತ್ನ ನಡೆಸಿದ್ದು ಬೆಳ್ಮಣ್ ಚೆಕ್ ಪೋಸ್ಟ್ ನಲ್ಲಿ ತಪಸಣೆ ನಡೆಸಿ ಟ್ಯಾಂಕರ್ ನ್ನು ವಾಪಸ್ಸು ಮತ್ತೆ ಮಂಗಳೂರಿಗೆ ಕಳುಹಿಸಲಾಗಿದೆ.
ನಿಯಮ ಮೀರಿ ಬಂದರೆ ಕ್ವಾರೆಂಟೈನ್ : ಹೊರ ರಾಜ್ಯಗಳಿಂದ ಬರುವ ವಾಹನ ಸವಾರರು ನಿಯಮ ಮೀರಿ ಉಡುಪಿ ಜಿಲ್ಲೆಯ ಗಡಿ ದಾಟಿದರೆ ಅಂತವರನ್ನು ಹೋಂ ಕ್ವಾರಂಟೈನ್ ಹಾಕಲಾಗುತ್ತದೆ. ಇತ್ತಿಚೆಗೆ ಇಲ್ಲಿನ ಚೆಕ್ ಪೋಸ್ಟ್ನ ತಪಾಸಣೆ ವೇಳೆ ಜಮ್ಮುವಿನಿಂದ ಬಂದ ವ್ಯಕ್ತಿಯನ್ನು ಇದೀಗ ಕಾರ್ಕಳದ ಭುವನೆಂದ್ರದಲ್ಲಿ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.