ಪುತ್ತೂರು, ಎ.16 (Daijiworld News/MB) : ಪುತ್ತೂರು ತಾಲೂಕು ಪಡುವನ್ನೂರ್ ಗ್ರಾಮದ ಮಾಪಳ ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿ ಪುತ್ತೂರು ಅರಿಯಡ್ಕ ಗ್ರಾಮದ ಶರತ್ ಕುಮಾರ್ (24) ವರ್ಷ ಹಾಗೂ ಪರಾರಿಯಾದ ಆರೋಪಿ ಕೇಶವ ಗೌಡ ಎಂದು ಗುರುತಿಸಲಾಗಿದೆ.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಬುಧವಾರ ದಾಳಿ ನಡೆಸಿದ್ದು ಸ್ಥಳದಲ್ಲಿದ್ದ ಅಂದಾಜು 2 ಲೀಟರ್ ಪ್ರಮಾಣದ ಕಳ್ಳ ಬಟ್ಟಿ ಸಾರಾಯಿ ಹಾಗೂ 200 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಡ್ರಮ್ಮ್, 100 ಲೀಟರ್ ಹುಳಿರಸ ಹಾಗೂ ಕಳ್ಳ ಬಟ್ಟಿ ತಯಾರಿಸಲು ಬಳಸಿದ ಪಾತ್ರೆ, ಬಟ್ಟೆ, ಸಾರಾಯಿ ಮಾರಾಟದಿಂದ ಬಂದಿರುವ 360 ರೂ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.