ಬಂಟ್ವಾಳ, ಎ.16 (DaijiworldNews/PY) : ವಿಶ್ವ ಹಿಂದು ಪರಿಷತ್ ಬಜರಂಗದಳ ಶ್ರೀ ದೇವಿ ಶಾಖೆ ವಿಟ್ಲ ಪ್ರಖಂಡ ಬರಿಮಾರ್ ಇದರ ಆಶ್ರಯದಲ್ಲಿ 50 ಮನೆಗಳಿಗೆ 10 ಕೆ.ಜಿ ಅಕ್ಕಿ ವಿತರಿಸಲಾಯಿತು.
ಅಧ್ಯಕ್ಷ ಹಾಗೂ ಸಂಘದ ಸದಸ್ಯರು ಬಂಟ್ವಾಳ ತಾಲೂಕಿನ ಬರಿಮಾರ್ ಗ್ರಾಮದಲ್ಲಿ ಸದಾನಂದ ಪೂಜಾರಿ ಬರಿಮಾರ್ ಇವರ ನೇತೃತ್ವದಲ್ಲಿ ಕಡು ಬಡವರಿಗೆ ತಲಾ 10 ಕೆಜಿ ಅಕ್ಕಿ ವಿತರಿಸಿದರು.
ವಿಶ್ವ ಹಿಂದು ಪರಿಷತ್ ಬಜರಂಗದಳ ಶ್ರೀ ದೇವಿ ಶಾಖೆ ವಿಟ್ಲ ಪ್ರಖಂಡ ಬರಿಮಾರ್ ಇದರ ಆಶ್ರಯದಲ್ಲಿ ಎರಡನೇ ಹಂತದಲ್ಲಿ ಅಕ್ಕಿ ವಿತರಣೆಯಾಗಿದ್ದು, 20 ಬಡ ಮನೆಗಳಿಗೆ ವಿತರಿಸಿದರು.
ಶರತ್ ಕಲ್ಲೆಟ್ಟಿ 50 ಕೆಜಿ, ಹರಿಕೃಷ್ಣ ಪಂಚಾಯತ್ ಸದಸ್ಯ 40ಕೆಜಿ, ಸದಾಶಿವ ಶೆಟ್ಟಿ ದತ್ತ ಕೃಪಾ ಸ್ಟೋರ್ ಮಾಣಿ 40 ಕೆಜಿ, ಯಶೋಧರ ಮುಳಿಬೈಲು ಬೆಟ್ಟು 20ಕೆಜಿ ಅಕ್ಕಿ ಬಡ ಮನೆಗಳಿಗೆ ವಿತರಿಸಿದರು.