ಮಂಗಳೂರು, ಏ15 (Daijiworld News/MSP): ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಒಟ್ಟು 265 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಗುರುವಾರ ಮುಟ್ಟುಗೋಲು ಹಾಕಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಗು ತಪಾಸಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದ 178 ದ್ವಿಚಕ್ರ ವಾಹನ, 13 ರಿಕ್ಷಾ, ಹಾಗೂ 75 ಚತುಶ್ಚಕ್ರ ವಾಹನ ಸೇರಿದಂತೆ ಒಟ್ಟು ೨೬೫ ವಾಹನಗಳ ಮೇಲೆ ಕೇಸು ದಾಖಲಿಸಲಾಗಿದೆ.
ದ.ಕ. ಜಿಲ್ಲೆ ಕ್ಲಸ್ಟರ್ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ಕಠಿಣ ಲಾಕ್ಡೌನ್ ನಿಯಮಾವಳಿಗಳನ್ನು ಮುಂದುವರಿಸಲಾಗಿದೆ. ಅವಶ್ಯವಿಲ್ಲದಿದ್ದರೂ ಸಾರ್ವಜನಿಕ ಹೊರಗೆ ಬರಬೇಡಿ ಎಂದು ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮನವಿ ಮಾಡಿದರೂ ತಮ್ಮ ವಾಹನಗಳ ಸಮೇತ ಸುತ್ತಾಡುವುದನ್ನು ಬಿಟ್ಟಿಲ್ಲ. ದಿನಂಪ್ರತಿ ವಾಹನ ಮುಟ್ಟುಗೋಲು ಹಾಕಿಕೊಂಡರೂ ವಾಹನ ಸವಾರರು ಕ್ಯಾರೇ ಅನ್ನುತ್ತಿಲ್ಲ.