ಉಡುಪಿ, ಏ 16(DaijiworldNews/SM): ದೇಶದಲ್ಲಿ ಕೊರೋನಾ ಎಂಬ ಮಹಾಮಾರಿ ತಾಂಡವಾಡುತ್ತಿದೆ ಈ ಸಮಯದಲ್ಲಿ ದೇಶವಾಸಿಗಳು ಸರ್ಕಾರದ ಆಜ್ಞೆಯನ್ನು ಪಾಲಿಸಬೇಕು ಮನೆಯಲ್ಲಿಯೇ ಇದ್ದುಕೊಂಡು ಈ ಮಹಾಮಾರಿಯ ವಿರುದ್ಧ ಹೋರಾಡಬೇಕು. ಇಂತಹ ಸಮಯಲ್ಲಿ ಉಳ್ಳವರು ಇಲ್ಲದವರಿಗೆ ಜಾತಿಮತ ಪಂಗಡ ನೋಡದೆ ಸಹಕಾರ ಮಾಡುವುದರ ಜತೆಗೆ ಅವರ ಪರ ನಿಂತು ಧೈರ್ಯ ತುಂಬುವ ಕಾರ್ಯ ಮಾಡಬೇಕಾಗಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಗಳು ಕೋವಿಡ್ 19 ವಿಚಾರವಾಗಿ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ಇಂತಹ ಸಮಯದಲ್ಲಿ ಕೂಡ ದೇಶದ ಗಡಿಯಲ್ಲಿ ಗುಂಡಿನದಾಳಿ ನಡೆಸುವುದು ಮತ್ತು ಒಳಸುಸುಳುವಿಕೆಗೆ ಪ್ರಯತ್ನ ಮಾಡುವುದು ಅತ್ಯಂತ ಖಂಡನೀಯ ಎಂದರು. ದೇಶದಲ್ಲೆ ಕೋವಿಡ್ ವಿರುದ್ಧ ಸೇವೆ ಮಾಡುತ್ತಿರುವ ಎಲ್ಲಾ ವೈದ್ಯರಿಗೆ, ಪೋಲಿಸ್, ಮಾಧ್ಯಮ, ನರ್ಸ್ಗಳು, ಆಶಾ ಸಿಬ್ಬಂದಿ, ಪ್ಯಾರಮೆಡಿಕಲ್ ಸಿಬ್ಬಂಧಿಗಳಿಗೆ ಅಭಿನಂದನೆಗಳು ಎಂದರು.
ಕಿರಿಯ ಸ್ವಾಮಿಗಳಾದ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮಿಜಿಗಳು ಮತನಾಡಿ, ಸದ್ರಿ ಮಠದಲ್ಲಿ ಹೊರಗಿನವರಿಗೆ ಪ್ರವೇಶ ಇಲ್ಲ. ಇಲ್ಲಿಯ ಎಲ್ಲಾ ಕಲಿಕಾ ವಿದ್ಯಾರ್ಥಿಗಳನ್ನು ಇಗಾಗಲೇ ಅವರವರ ಮನೆಗಳಿಗೆ ಕಳಿಸಲಾಗಿದೆ. ಕಟ್ಟು ನಿಟ್ಟಾಗಿ ಪಲಿಮರು ಮಠದಲ್ಲಿಯೂ ಮಾನ್ಯ ಪ್ರಧಾನ ಮಂತ್ರಿಗಳ ಲಾಕ್ಡೌನ್ ಅದೇಶ ಪಾಲಿಸಲಾಗುತ್ತಿದೆ ಎಂದರು.