ಮಂಗಳೂರು,ಏ 17 (Daijiworld News/MSP): ದೆಹಲಿಯಿಂದ ಹಿಂತಿರುಗಿದ್ದಉಪ್ಪಿನಂಗಡಿಯ ಯುವಕನಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಕಳೆದ ಕೆಲವು ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ನಿರಾಳವಾಗಿದ್ದ ದ.ಕ ಜನತೆಯಲ್ಲಿ ಈ ಪ್ರಕರಣ ಮತ್ತೆ ಆತಂಕಕ್ಕೆ ದೂಡಿದೆ.
ಮಾ.28 ದೆಹಲಿಯಿಂದ ಹಿಂತಿರುಗಿದ್ದ 39 ವರ್ಷದ ಯುವಕನನ್ನು 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು. ಏ.2 ರಂದು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಇತನ ವರದಿ ನೆಗೆಟಿವ್ ಬಂದಿದ್ದು, ಆ ಬಳಿಕ ಏ.13ರಂದು ಕಳುಹಿಸಿದ ಎರಡನೇ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ
ತಕ್ಷಣ ಯುವಕನನ್ನು ವೆನ್ ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 13 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದ್ದು, ಈ ಪೈಕಿ 9 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.