ಮಂಗಳೂರು, ಎ.17 (DaijiworldNews/PY) : ಪಿ.ಕೆ. ದೂಜಪೂಜಾರಿ ಟೆಕ್ಸ್ ಟೈಲ್ಸ್ ನ ಮಾಲಕರಾದ ಪಿ.ಕೆ. ಲೋಹಿತ್ ಪೂಜಾರಿ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
ಲೋಹಿತ್ ಪೂಜಾರಿ ಅವರು ಶ್ರೀ ಗೋಕರ್ಣ ಕ್ಷೇತ್ರದ ಅಭಿವೃದ್ಧಿ ಸಮಿತಿ ಹಾಗೂ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಸದಸ್ಯರಾಗಿದ್ದರು.
ಕೊಡುಗೈ ದಾನಿ, ಖ್ಯಾತ ಜವುಳಿ ವ್ಯಾಪಾರಸ್ಥರಾದ ಇವರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು , ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಪಡುಬಿದ್ರೆಯಲ್ಲಿ ನೆರವೇರಿತು.
ಲಾಕ್ ಡೌನ್ನ ಅನಾನುಕೂಲದಿಂದಾಗಿ ಮೃತರ ಸದ್ಗತಿಗಾಗಿ ಹಿತೈಷಿಗಳೆಲ್ಲರು ತಮ್ಮ ಮನೆಗಳಲ್ಲಿಯೇ ಪ್ರಾರ್ಥಿಸಬೇಕಾಗಿ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.