ಕಾಸರಗೋಡು, ಏ 17(DaijiworldNews/SM): ಜಿಲ್ಲೆಯ ಜನತೆಗೆ ಇಂದು ಖುಶಿಯ ಸುದ್ದಿ ಸಿಕ್ಕಿದೆ. ಇಂದು ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ.
ಇನ್ನು ಜಿಲ್ಲೆಯ ಆರು ಮಂದಿ ಶುಕ್ರವಾರದಂದು ಗುಣಮುಖರಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ಮುನ್ಸೂಚನೆ ಲಭ್ಯವಾಗಿದೆ. ಇನ್ನು ಗುರುವಾರದಂದು ಕಾಸರಗೋಡಿನಲ್ಲಿ ಒಂದು ಪಾಸಿಟಿವ್ ಪ್ರಕರಣ ದಾಖಲಾಗಿತ್ತು.
ಇನ್ನು ಕೇರಳದಲ್ಲಿ ಇಂದು ಒಂದೇ ಒಂದು ಪಾಸಿಟಿವ್ ಪ್ರಕರಣ ಮಾತ್ರವೇ ದಾಖಲಾಗಿದ್ದು, ಕೇರಳ ರಾಜ್ಯದಲ್ಲೂ ಕೊರೊನಾ ನಿಯಂತ್ರಣಕ್ಕೆ ಬರುವ ಮುನ್ಸೂಚನೆ ಲಭ್ಯವಾಗಿದೆ. ಇನ್ನು ಗುರುವಾರ ಕೇರಳದಲ್ಲಿ 27 ಮಂದಿ ಸೋಂಕು ಮುಕ್ತರಾಗಿದ್ದು, ಈ ಪೈಕಿ 24 ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದರು.