ಬೆಳ್ತಂಗಡಿ, ಏ18 (Daijiworld News/MSP): ಸುಮಾರು 80 ಎಕರೆ ಪ್ರದೇಶದಲ್ಲಿ 1.5 ಕೋಟಿ ಸಾಲ ಮಾಡಿ ಅನನಾಸು ಬೆಳೆದ ಕೃಷಿಕರೊಬ್ಬರು ಮಹಾಮಾರಿ ಕೊರೊನಾ ಲಾಕ್ ಡೌನ್ ನಿಂದಾಗಿ ಮಾರುಕಟ್ಟೆ ಬೇಡಿಕೆಯಿಲ್ಲದೆ ಕಂಗಾಲಾಗಿದ್ದಾರೆ.
ಕೇರಳದ ಶೈಜು ಎಂಬವರು ಕಕ್ಕಿಂಜೆ ಅಸುಪಾಸಿನಲ್ಲಿ ಕೆಲವು ಜನರಿಂದ ಜಾಗಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ವ್ಯವಸ್ಥಿತ ರೀತಿಯಲ್ಲಿ ಅನನಾಸು ಬೆಳೆ ಬೆಳೆದಿದ್ದಾರೆ. ಬೆಳೆ ಚೆನ್ನಾಗಿ ಬಂದಿದ್ದರೂ ಕಟಾವಿಗೆ ಬಂದ ಈ ಸಂದರ್ಭದಲ್ಲಿ ಲಾಕ್ ಡೌನ್ ನಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ಕೇಳುವವರಿಲ್ಲದ ಪರಿಸ್ಥಿತಿ ಇವರದ್ದಾಗಿದೆ. ಪ್ರತಿ ಬಾರಿ ಅವರು ಬೆಳೆದ ಅನನಾಸುಗಳನ್ನುದೆಹಲಿ,ಪೂನಾ,ಮುಂಬೈ,ಜೈಪುರ,ಅಲಹಾಬಾದ್ ಹಾಗೂ ಇನ್ನಿತರ ಕಡೆಗಳಿಗೆ ಸಾಗಿಸಿ ಮಾರುಕಟ್ಟೆ ಮಾಡುತಿದ್ದರು ಅದರೆ ಈ ಬಾರಿ ಲಾಕ್ ಡೌನ್ ನಿಂದ ಸಾಗಾಟದ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಕಂಗಾಲಾಗಿದ್ದಾರೆ.
ದೊಡ್ಡ ಮೊತ್ತದ ಬ್ಯಾಂಕ್ ಸಾಲ ಮಾಡಿ ಈ ಬೆಳೆಯನ್ನು ಮಾಡಿದ್ದಾರೆ ಅದರೆ ಈ ಕೊರೊನಾ ಮಹಾಮಾರಿಯಿಂದಾಗಿ ಬೇಡಿಕೆ ಇಲ್ಲದೆ ಕಣ್ಣೀರಿಡುವ ಸ್ಥಿತಿ ಇವರದ್ದಾಗಿದೆ. ಪ್ರತೀ ಬಾರಿ ಕೆ.ಜಿ.ರೂ 40 ರೂ ನಿಂದ 50 ರೂ ವರೆಗೆ ಮಾರಾಟವಾಗುತ್ತಿದ್ದ ಹಣ್ಣುಗಳು ಈ ಬಾರಿ ಕೇಳುವವರಿಲ್ಲದಂತ್ತಾಗಿದೆ.ಈಗಾಗಲೇ ಕಟಾವಿಗೆ ಬಂದಿರುವ ಬೆಳೆಯನ್ನು ಸ್ಥಳೀಯವಾಗಿ ಕೆಲವು ಕಡೆಗಳಿಗೆ ಕೆ.ಜಿ ರೂ 10ರಿಂದ 15 ರೂಪಾಯಿಗೆ ಸ್ವಲ್ಪ ನ ಅನನಾಸನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ.ಈ ಸಲ ಸುಮಾರು ಒಂದು ಕೋಟಿ ಆರ್ಥಿಕ ನಷ್ಟ ಅನುಭವಿಸಿದ ಶೈಜು ಅನಿರೀಕ್ಷಿತವಾಗಿ ಬಂದೆರಗಿದ ಆಘಾತವನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.