ಬೆಳ್ತಂಗಡಿ, ಎ.18 (DaijiworldNews/PY) : ತಾಲೂಕಿನ ಕಾಶಿಪಟ್ಣ ಗ್ರಾಮದ ನೆತ್ತರ್ ಪಲ್ಕೆಮನೆ ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುವ ಸ್ಥಳಕ್ಕೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿ ಸಾರಾಯಿ ಬಳಸಲು ಬಳಸಿದ್ದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಕಾಶಿಪಟ್ಣ ಗ್ರಾಮದ ನೆತ್ತರ್ ಪಲ್ಕೆಮನೆ ನಿವಾಸಿ ಎಲಿಯಸ್ ಕುವೆಲ್ಲೋ (66) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಅಬಕಾರಿ ಪೊಲೀಸರು ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಎಲಿಯಸ್ ಕುವೆಲ್ಲೋ ಎಂಬಾತ ಮನೆಯಲ್ಲಿದ್ದ ಬೆಲ್ಲ ಹಾಗೂ ಗೇರುಹಣ್ಣಿನ ವಾಶ್ ಬಳಸಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಬಳಸಿದ್ದ ಎಲ್ಲಾ ಸಲಕರಣೆಗಳೊಂದಿಗೆ 09 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ 50 ಲೀಟರ್ ವಾಶ್ ವಶಪಡಿಸಿಕೊಂಡಿದ್ದು, ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.