ಕಾಸರಗೋಡು, ಎ.18 (DaijiworldNews/PY) : ಕೊರೊನಾ ಸೋಂಕು ತಡೆಯುವಲ್ಲಿ ಕಾಸರಗೋಡು ದೇಶಕ್ಕೆ ಮಾದರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ.
ಸೋಂಕು ನಿಯಂತ್ರಿಸುವಲ್ಲಿ ಕಾಸರಗೋಡು ಯಶಸ್ವಿಯಾಗಿದೆ. ಆರಂಭದಿಂದಲೇ ಆತಂಕದ ವಾತಾವರಣ ಕಾಸರಗೋಡಿನಲ್ಲಿ ಕಂಡು ಬಂದಿತ್ತು. 168 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು . ಈ ಪೈಕಿ 117 ಮಂದಿ ಗುಣಮುಖರಾಗಿದ್ದಾರೆ . ಯಾವುದೇ ಸಾವು ಸಂಭವಿಸಿಲ್ಲ. ಕೇರಳ ಸರಕಾರ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕಾರ್ಯವನ್ನು ಶ್ಲಾಘಿಸಿದೆ.
ಸೋಂಕು ಹರಡದಂತೆ ಆರಂಭದಲ್ಲಿ ಕ್ರಮ ತೆಗೆದುಕೊಂಡಿತ್ತು . ಕೊರೊನಾ ರೋಗಿಗಳಿಗೆ ವಿಶೇಷ ಆಸ್ಪತ್ರೆ ತೆರೆಯಿತು. ಲ್ಯಾಬ್, ಕ್ವಾರಂಟೈನ್ ಹಾಗೂ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿತ್ತು. ಸಂದಿಗ್ದ ಪರಿಸ್ಥಿತಿಯಲ್ಲೂ ಕೊರೊನಾ ಮಹಾಮಾರಿಯಿಂದ ಮೆಟ್ಟಿನಿಂತ ಕಾಸರಗೋಡು ಎಲ್ಲರಿಗೂ ಮಾದರಿಯಾಗಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ವಕ್ತಾರ ಲೆವ್ ಅಗರ್ವಾಲ್ ತಿಳಿಸಿದ್ದಾರೆ.
ಇದುವರೆಗೆ 115 ಮಂದಿ ಗುಣಮುಖರಾಗಿದ್ದು, ಒಟ್ಟು ರೋಗಿಗಳ 68.45 ಶೇಕಡಾದಷ್ಟು ರೋಗಮುಕ್ತರಾಗಿದ್ದಾರೆ. ಇದುವರೆಗೆ 168 ಮಂದಿಗೆ ಸೋಂಕು ತಗಲಿದೆ.
ಶನಿವಾರ ಜಿಲ್ಲೆಯಲ್ಲಿ ಹೊಸ ಪ್ರಕರಣ ದೃಢಪಟ್ಟಿಲ್ಲ. ಇಬ್ಬರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 53ಕ್ಕೆ ಇಳಿದಿದೆ. ನಿಗಾದಲ್ಲಿರುವವರ ಸಂಖ್ಯೆ 5857ಕ್ಕೆ ಕುಸಿದಿದೆ. 117 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.