ಮಂಗಳೂರು, ಎ.18 (DaijiworldNews/PY) : ದ.ಕ ಜಿಲ್ಲೆಯಲ್ಲಿ ಶನಿವಾರ ಯಾವುದೇ ಪಾಸಿಟಿವ್ ಪ್ರಕರಣಗಳು ಲಭ್ಯವಾಗಿಲ್ಲ.
ದ.ಕ. ಜಿಲ್ಲೆಯಲ್ಲಿ ಇಂದು ಲಭ್ಯವಾದ ವರದಿಯ ಪ್ರಕಾರ 46 ಪರೀಕ್ಷಾ ವರದಿಗಳು ಸಿಕ್ಕಿವೆ. ಎಲ್ಲಾ 28 ಪ್ರಕರಣಗಳು ನೆಗೆಟಿವ್ ಆಗಿವೆ. ಭಾನುವಾರದವರೆಗೆ ಒಟ್ಟು 39,196ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. 260 ಮಂದಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು 15 ಮಂದಿ ಇಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 5813 ಮಂದಿ ಈಗಾಗಲೇ 28 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ. ಇನ್ನು ಇಲ್ಲಿಯ ತನಕ ಸುಮಾರು 865 ಮಂದಿಯ ಸ್ಯಾಂಪಲ್ಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, 720 ಪರೀಕ್ಷಾ ವರದಿಗಳು ಬಂದಿವೆ. ಇವುಗಳಲ್ಲಿ 707 ಪ್ರಕರಣಗಳು ನೆಗೆಟಿವ್ ವರದಿಯನ್ನು ನೀಡಿದ್ದು, 13 ಪ್ರಕರಣಗಳು ಪಾಸಿಟಿವ್ ಆಗಿದೆ. 1 ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ, 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮ ಹಾಗೂ ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಜನತಾ ಕಾಲೋನಿ-ಕರಯ ಗ್ರಾಮ, ಮಂಗಳೂರು ತಾಲೂಕಿನ ಸ್ಮಾರ್ಟ್ ಪ್ಲಾನೆಟ್, ತೊಕೊಟ್ಟು, ಪುತ್ತೂರು ತಾಲೂಕಿನ ಸಂಪ್ಯ ಮನೆ ಹಾಗೂ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮಗಳ ಪ್ರದೇಶ ಹಾಗೂ ಉಪ್ಪಿನಂಗಡಿಯನ್ನು ಕಂಟೈನ್ಮೆಂಟ್ ಝೋನ್ಗಳೆಂದು ಗುರುತಿಸಲಾಗಿದೆ.