ಬಂಟ್ವಾಳ, ಏ 19(DaijiworldNews/SM): ಕೊರೊನಾ ಪಾಸಿಟಿವ್ ಗೆ ಬಲಿಯಾದ ಮಹಿಳೆಯನ್ನು ಐದು ದಿನಗಳ ಹಿಂದೆ ತಪಾಸಣೆ ನಡೆಸಿದ್ದ ವೈದ್ಯರೊಬ್ಬರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಲಾಕ್ ಡೌನ್ ಬಳಿಕ ಎಲ್ಲಾ ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದರೂ ಕೂಡ ವೈದ್ಯರು ಕ್ಲೀನಿಕ್ ಹಾಗೂ ಮನೆಯಲ್ಲೇ ಸೇವೆ ನೀಡುತ್ತಿದ್ದರು. ಇದೀಗ ಅವರ ಸೇವೆಯೇ ಅವರಿಗೆ ಸಮಸ್ಯೆಯನ್ನುಂಟು ಮಾಡಿದೆ.
ದ.ಕ.ಜಿಲ್ಲೆಯಲ್ಲಿ ಕೊರೊನಾ ವೈರಸ್ನಿಂದ 50 ವರ್ಷದ ಮಹಿಳೆಯೊಬ್ಬರು ಏಪ್ರಿಲ್ 19ರಂದು ಮೃತಪಟ್ಟಿದ್ದಾರೆ. ಮಧ್ಯಾಹ್ನ ಬಂದ ವರದಿಯಲ್ಲಿ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಅವರನ್ನು ತಪಾಸಣೆಗೆ ಒಳಪಡಿಸಿದ ವೈದ್ಯರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಸದ್ಯ ಬಂಟ್ವಾಳ ಜಿಲ್ಲೆಯಲ್ಲೇ ಮುನ್ನೆಚ್ಚರಿಗೆ ವಹಿಸಲಾಗಿದ್ದು, ಎಲ್ಲಾ ರೀತಿಯ ನಿಗಾ ವಹಿಸಲಾಗಿದೆ.