ಬಂಟ್ವಾಳ, ಏ 19(DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರ್ನಾ ಸೋಂಕಿಗೆ ಮೊದಲ ಬಲಿಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಅದರಲ್ಲೂ ಮೃತ ಮಹಿಳೆಯು ಬಂಟ್ವಾಳ ನಗರ ಪ್ರದೇಶದವರಾಗಿದ್ದು, ಬಂಟ್ವಾಳ ನಗರವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.
ಮುಂಜಾಗೃತಾ ಕ್ರಮವಾಗಿ ಪಟ್ಟಣವನ್ನು ಸಂಪೂರ್ಣ ಸೀಲ್ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ. ಬಂಟ್ವಾಳ ಕಸಬಾ, ಜಕ್ರಿಬೆಟ್ಟು, ಬಡ್ಡಕಟ್ಟೆ ಸಹಿತ ಪಟ್ಟಣಕ್ಕೆ ಪ್ರವೇಶಿಸುವ ಮತ್ತು ಹೊರ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಸಾವನ್ನಪ್ಪಿರುವ ಮಹಿಳೆಯ ಮನೆ ಬಂಟ್ವಾಳ ಪೇಟೆಯ ಮಧ್ಯೆ ಇದೆ. ಈ ಹಿನ್ನೆಲೆಯಲ್ಲಿ ಅದರ ಸುತ್ತಮುತ್ತ ಸುಮಾರು 300ಕ್ಕೂ ಅಧಿಕ ಮನೆಗಳು, ಅಂಗಡಿ ಮುಂಗಟ್ಟುಗಳಿವೆ. ಈ ಎಲ್ಲಾ ಪ್ರದೇಶಗಳಿಗೂ ಪೊಲೀಸರು ತೆರಳಿ ಮನೆಯಿಂದ ಯಾರೂ ಹೊರ ಬರದಂತೆ ಸೂಚಿಸುತ್ತಿದ್ದಾರೆ.
ಮೂರು ವಿಭಾಗಗಳಲ್ಲಿ ಸೀಲ್ ಡೌನ್:
ಕೊರೊನಾಗೆ ಮೊದಲ ಬಲಿಯಾದ ಬೆನ್ನಲ್ಲೇ ಸ್ಥಳೀಯವಾಗಿ ಜನರು ಮನೆಯಲ್ಲೇ ಇರುವಂತೆ ಪೊಲೀಸರು ಮೈಕ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
1. ಮೃತ ಮಹಿಳೆಯ ಮನೆಯಿಂದ 100 ಮೀ. ಅಂತರದಲ್ಲಿ ಕಠಿಣ ಲಾಕ್ ಡೌನ್
2. ಸುತ್ತಾ 500 ಮೀ. ಅಂತರದಲ್ಲಿ ತೀವ್ರ ನಿಗಾ
3. 3 ಕಿ.ಮೀ. ಅಂತರದಲ್ಲಿ ಕಂಪ್ಲೀಟ್ ಸೀಲ್ ಡೌನ್