ಬೆಳ್ತಂಗಡಿ, ಎ.20 (Daijiworld News/MB) : "ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡುಹಾರಿಸಿ ಕೊಲ್ಲಬೇಕು" ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಪಾದರಾಯನಪುರದಲ್ಲಿ ನಡೆದ ಘಟನೆಯ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಉದ್ವೇಗರಹಿತವಾಗಿ, ವಸ್ತುನಿಷ್ಠವಾಗಿ ಯೋಚಿಸಿ ಹೇಳುತ್ತಿದ್ದೇನೆ, "ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡುಹಾರಿಸಿ ಕೊಲ್ಲಬೇಕು, ಇಲ್ಲದಿದ್ದರೆ ಇಂಥಹ ಘಟನೆಗಳು ನಿಲ್ಲಲು ಸಾಧ್ಯವೇ ಇಲ್ಲ" ಎಂದಿದ್ದಾರೆ.
ಕೈ ಮುಗಿದು ಮನವಿ ಮಾಡಿದರು ಬಗ್ಗದವರಿಗೆ ಕೈ ಎತ್ತಿ ಅರಿವು ಮೂಡಿಸಬೇಕಾದ ಕಾಲು ಇದು. ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ವೈದ್ಯಕೀಯ ಸಿಬ್ಬಂದಿಗಳು ಅವರುಗಳ ಬದುಕನ್ನು ಪಣಕ್ಕೆ ಇಟ್ಟು ಹೋರಾಡುತ್ತಿದ್ದಾರೆ. ಅವರುಗಳ ಈ ಹೋರಾಟ ರಾಜ್ಯದ ಜನತೆಯ ಆರೋಗ್ಯವನ್ನು ಕಾಯುವುದಕ್ಕಾಗಿ, ನಮ್ಮೆಲ್ಲರ ಆರೋಗ್ಯದ ರಕ್ಷಣೆಗಾಗಿ ಎಂದು ಹೇಳಿದ್ದಾರೆ.
ತಮ್ಮ ಕುಟುಂಬಗಳನ್ನು ದೂರವಿಟ್ಟು ನಮಗಾಗಿ ಕೆಲಸ ಮಾಡುವಂತಹ ತ್ಯಾಗಮಯಿಗಳ ಮೇಲೆ ದಾಳಿ ಮಾಡುವವ ಯಾರೇ ಆಗಲಿ ಅವನನ್ನು ಗುಂಡಿಟ್ಟು ಕೊಂದರೂ ತಪ್ಪಿಲ್ಲ. ಇಂಥಹ ಸಂದರ್ಭಗಳಲ್ಲಿ ಪೊಲೀಸರು ಅವರ ಶಕ್ತಿಯನ್ನು ಉಪಯೋಗಿಸಲು ಅಧಿಕಾರ ನೀಡಿ ಗೃಹ ಮಂತ್ರಿಗಳೇ ಎಂದು ಆಗ್ರಹಿಸಿದ್ದಾರೆ.
ಈ ಕುರಿತಾಗಿ ಫೇಸ್ಬುಕ್ನಲ್ಲೂ ಅವರು ಪೋಸ್ಟ್ ಮಾಡಿದ್ದು ನಿನ್ನೆ ಪಾದರಾಯಪುರದಲ್ಲಿ ನಡೆದ ಘಟನೆಯನ್ನು ನೋಡಿ ಉದ್ವೇಗದಲ್ಲಿ, ನೋವಿನಿಂದ ಮಾತನಾಡುತ್ತಾ "ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡು ಹಾರಿಸಿ ಕೊಂದರೂ ತಪ್ಪಿಲ್ಲ" ಎಂದು ಹೇಳಿದ್ದೆ. ಇಂದು ಉದ್ವೇಗರಹಿತವಾಗಿ, ವಸ್ತುನಿಷ್ಠವಾಗಿ ಯೋಚಿಸಿ ಹೇಳುತ್ತಿದ್ದೇನೆ, "ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡುಹಾರಿಸಿ ಕೊಲ್ಲಬೇಕು, ಇಲ್ಲದಿದ್ದರೆ ಇಂಥಹ ಘಟನೆಗಳು ನಿಲ್ಲಲು ಸಾಧ್ಯವೇ ಇಲ್ಲ" ಎಂದು ಹೇಳಿದ್ದಾರೆ.