ಕಾಸರಗೋಡು, ಏ 20 (DaijiworldNews/SM): ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದು, ಜಿಲ್ಲೆಯಲ್ಲಿದ್ದ 142 ಮಂದಿ ಗುಣಮುಖರಾಗುವ ಮೂಲಕ ಕಾಸರಗೋಡು ಜಿಲ್ಲೆಯ ಜನತೆಗೆ ಶುಭ ಸುದ್ದಿಯನ್ನು ನೀಡಿದೆ. ಇದೀಗ ಕೇವಲ 27 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 169 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 142 ಮಂದಿ ಗುಣಮುಖರಾಗಿದ್ದಾರೆ. ಇಂದು 19 ಮಂದಿ ಗುಣಮುಖರಾಗಿದ್ದಾರೆ. ಆ ಮೂಲಕ ಕಾಸರಗೋಡು ಸೋಂಕು ಮುಕ್ತ ಜಿಲ್ಲೆಯಾಗುವತ್ತ ಮುಖ ಮಾಡುತ್ತಿದೆ.
ಇನ್ನು ಜಿಲ್ಲೆಯಲ್ಲಿ ಸೋಮವಾರದಂದು ಯಾವುದೇ ಹೊಸ ಸೋಂಕು ಪ್ರಕರಣ ಪತ್ತೆಯಾಗಿಲ್ಲ. 12 ದಿನಗಳ ಅವಧಿಯಲ್ಲಿ ಕೇವಲ ಏಳು ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಇದೀಗ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ಮೂಲಕ ಅತೀ ಹೆಚ್ಚು ಸೋಂಕಿತರಿದ್ದ ಜಿಲ್ಲೆ ಕಾಸರಗೋಡು ದೇಶಕ್ಕೆ ಮಾದರಿಯಾಗಿದೆ.