ಮಂಗಳೂರು,ಸೆ18: ಮಂಗಳೂರಿನ ಸುರತ್ಕಲ್ ನಿಲ್ದಾಣದಿಂದ ಕೇರಳಕ್ಕೆ ರೈಲಿನಲ್ಲಿ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಒಂದು ಕೋಟಿ 28 ಲಕ್ಷ 32 ಸಾವಿರ ಮೌಲ್ಯದ ಚಿನ್ನಾಭರಣವನ್ನು ದೋಚಿ ತಂಡವೊಂದು ಪರಾರಿಯಾಗಿದೆ.
ಇಂದು ಬೆಳಗ್ಗೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ಕೃತ್ಯ ನಡೆದಿದ್ದು ದರೋಡೆಗೆ ಒಳಗಾದ ರಾಜಸ್ಥಾನ ಮೂಲದ ಉದಯಪುರ ಜಿಲ್ಲೆಯ ರಾಜೇಂದ್ರ ಸಿಂಗ್ ಪಡುಬಿದ್ರೆ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ವ್ಯಾಪಾರಕ್ಕಾಗಿ ಕೇರಳದ ತಿರುವನಂತಪುರಕ್ಕೆ ತೆರಳುವ ಸಂದರ್ಭ ತಾನಿದ್ದ ಬೋಗಿಯೊಳಗೆ ಬಂದ ನಾಲ್ವರ ತಂಡ ಪಿಸ್ತೂಲ್ ತೋರಿಸಿ ತನ್ನ ಬಳಿ ಇದ್ದ 4 ಕೆಜಿ 100 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.