ಮಂಗಳೂರು, ಮಾ 07 : ಕರ್ನಾಟಕ, ಕಾಂಗ್ರೆಸ್ಸಿಗೊಂದು ಎಟಿಎಂ ಇದ್ದಂತೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಲೇವಡಿ ಮಾಡಿದ್ದಾರೆ. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಜನಸುರಕ್ಷಾ ಯಾತ್ರೆಯ ಸಮಾರೋಪ ಭಾಷಣ ಮಾಡಿದ ಅವರು, ಯೋಜನೆಗಳಲ್ಲಿ ಲೂಟಿ ಮಾಡಿದ ಹಣ ಯಾರ ಜೇಬು ಸೇರುತ್ತಿದೆ. ಅಭಿವೃದ್ಧಿಯ ಹಣ ಎಲ್ಲಿಗೆ ಹೋಯಿತು, ಅಧಿಕಾರಿಗಳು ಯಾಕೆ ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ದೇಶಕ್ಕೊಂದು ಸಮಸ್ಯೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಜನತೆಗೆ ರಕ್ಷಣೆ ಇಲ್ಲ. ಈ ಸರ್ಕಾರಕ್ಕೆ ಜಿಹಾದಿ ಶಕ್ತಿಗಳೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದರು. ಈಶಾನ್ಯದ ರಾಜ್ಯಗಳು ಕಾಂಗ್ರೆಸ್ ಮುಕ್ತವಾಗಿದೆ. ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಕರ್ನಾಟಕವನ್ನು ಕಾಂಗ್ರೆಸ್ ನಿಂದ ಮುಕ್ತಗೊಳಿಸಬೇಕಿದೆ ಎಂದರು.
ಇನ್ನು ಉಳಿದಂತೆ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯಿಂದಾಗಿ ಬಲಿದಾನವಾದ ಮುಗ್ಢ ಹಿಂದೂ ಯುವಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆದು ಕರ್ನಾತಕವನ್ನು ಕಾಂಗ್ರೆಸ್ ಮುಕ್ತಗೊಳಿಸುವ ತನಕ ವಿರಮಿಸುವುದಿಲ್ಲ ಎಂದು ಬಿಜೆಪಿ ನಾಯಕರು ಘೋಷಿಸಿದರು.
ಇದೇ ವೇಳೆ ಬೃಹತ್ ವೇದಿಕೆ ಬಲಭಾಗದಲ್ಲಿ ಬಲಿದಾನವಾದ 16 ಹಿಂದೂ ಯುವಕರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಮೈದಾನಕ್ಕೆ ಆಗಮಿಸಿದ ಯೋಗಿ ಅದಿತ್ಯನಾಥ್ ಮೊದಲು ಮೃತ ಕಾರ್ಯಕರ್ತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.