ಬಂಟ್ವಾಳ, ಎ.21 (Daijiworld News/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಬಲಿಯಾದ ಬಂಟ್ವಾಳದ ಮಹಿಳೆಯ ನೆರೆಮನೆ ಮಹಿಳೆಯಲ್ಲೂ ಕೊರೊನಾ ದೃಢಪಟ್ಟಿರುವ ಹಿನ್ನಲೆಯಲ್ಲಿ ಬಂಟ್ವಾಳ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ.
ಭಾನುವಾರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳದ ಕಸ್ಬಾದ ಮಹಿಳೆಯೋರ್ವರು ಮೃತಪಟ್ಟಿದ್ದು ಗಂಟಲ ಮಾದರಿಯ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಡಪಟ್ಟಿತ್ತು. ಮಂಗಳವಾರ ಆ ಮಹಿಳೆಯ ನೆರೆಮನೆಯ 67 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು ಬಂಟ್ವಾಳದಲ್ಲಿ ಆತಂಕ ಮನೆಮಾಡಿದೆ.
ಈಗಾಗಲೇ ಬಂಟ್ವಾಳ ನಗರದಲ್ಲಿ ಸಂಪೂರ್ಣ ಸೀಲ್ಡೌನ್ ಮಾಡಲಾಗಿದ್ದು ಇದೀಗ ಬಂಟ್ವಾಳ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು ಆ ಪೈಕಿ 3 ಸಕ್ರಿಯ ಪ್ರಕರಣಗಳಾಗಿದೆ.