ಉಡುಪಿ, ಏ 21(DaijiworldNews/SM): ವೈದ್ಯರ ಸಲಹಾ ಚೀಟಿ ಇಲ್ಲದೆ ಪ್ಯಾರಸಿಟಮಾಲ್ ಔಷಧವನ್ನು ವಿತರಿಸುವಂತಿಲ್ಲ ಎಂದು ಎಲ್ಲಾ ಔಷಧಾಲಯಗಳಿಗೆ ಆದೇಶ ನೀಡಲಾಗಿದೆ.
ಕೊರೊನಾ ವೈರಸ್ ರೋಗಗಳು ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ನಿಲ್ಲಿಸಲು, ಉಡುಪಿ ಜಿಲ್ಲೆಯ ಎಲ್ಲಾ ಚಿಲ್ಲರೆ ಔಷಧ ವ್ಯಾಪಾರಸ್ಥರು, ಕೆಮ್ಮು, ಶೀತ, ಜ್ವರ, ದಣಿವು, ಉಸಿರಾಟದ ತೊಂದರೆಗಳಂತಹ ರೋಗ ಲಕ್ಷಣಗಳಿಗೆ, ಪ್ಯಾರಸಿಟಮಾಲ್ ಆಧಾರಿತ ಔಷಧಿಗಳನ್ನು ವೈದ್ಯರ ಸಲಹಾ ಚೀಟಿಯಿಲ್ಲದೇ ಮಾರಾಟ ಮಾಡದಂತೆ ಉಡುಪಿ ವೃತ್ತದ ಸಹಾಯಕ ಔಷಧ ನಿಯಂತ್ರಕ ನಾಗರಾಜ್ ಸೂಚಿಸಿದ್ದಾರೆ.
ರೋಗಿಯ ಹೆಸರು, ವೈದ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ಎಲ್ಲಾ ದಾಖಲೆಗಳನ್ನು ನಿರ್ವಹಿಸಲು ಸೂಚಿಸಲಾಗಿದೆ. ಈ ಸೂಚನೆಯನ್ನು ಪಾಲಿಸಿದದ್ದಲ್ಲಿ, ಅಂತಹವರ ವಿರುದ್ದ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940ರಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ವೃತ್ತದ ಸಹಾಯಕ ಔಷಧ ನಿಯಂತ್ರಕ ನಾಗರಾಜ್ ತಿಳಿಸಿದ್ದಾರೆ.
ಕೆಮ್ಮು, ಶೀತ, ಜ್ವರ, ದಣಿವು ಮತ್ತು ಉಸಿರಾಟದ ತೊಂದರೆಗಳಂತಹ ಯಾವುದೇ ಅನುಮಾನಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಿಳಿಸುವಂತೆ ಅವರು ತಿಳಿಸಿದ್ದಾರೆ.