ಕಾಸರಗೋಡು, ಏ 21(DaijiworldNews/SM): ಕೇರಳದಲ್ಲಿ ಮಂಗಳವಾರ 19 ಹೊಸ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಮೂವರು ಕಾಸರಗೋಡು ಜಿಲ್ಲೆಗೆ ಸೇರಿದವರಾಗಿದ್ದಾರೆ. ಕಣ್ಣೂರು 10, ಪಾಲಕ್ಕಾಡ್ 4, ಮಲಪ್ಪುರಂ, ಕೊಲ್ಲಂನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.
ಕೆಲ ದಿನಗಳ ಬಳಿಕ ಒಂದೇ ದಿನ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ. ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ 171ಕ್ಕೆ ತಲುಪಿದೆ. ಈ ಪೈಕಿ 26 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಮಂಗಳವಾರ 4 ಮಂದಿ ಬಿಡುಗಡೆ ಗೊಂಡಿದ್ದಾರೆ.
ಮಂಗಳವಾರ ಸೋಂಕು ಪತ್ತೆಯಾದವರಲ್ಲಿ ಚೆಂಗಳದ 48 ವರ್ಷದ ನಿವಾಸಿ, 20 ವರ್ಷದ ಯುವಕ, ಮೊಗ್ರಾಲ್ ಪುತ್ತೂರಿನ 43 ವರ್ಷದ ವ್ಯಕ್ತಿ ಒಳಗೊಂಡಿದ್ದಾರೆ. ಮೂವರೂ ಕೂಡ ದುಬೈಯಿಂದ ಬಂದವರಾಗಿದ್ದಾರೆ.