ಮಂಗಳೂರು, ಎ.22 (DaijiworldNews/PY) : ಇಲ್ಲಿನ ಬಂದರ್ ಪ್ರದೇಶದಲ್ಲಿ ಮೀನು ಮಾರಾಟದ ಸಂದರ್ಭ ಮಾರಾಟಗಾರರು ಮಾಸ್ಕ್ ಧರಿಸುತ್ತಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಸಾಂದರ್ಭಿಕ ಚಿತ್ರ
ಆಳ ಸಮುದ್ರದ ಮೀನುಗಾರಿಗೆ ಇಲ್ಲಿ ಸ್ಥಗಿತಗೊಂಡ ಕಾರಣ, ಇತರ ರಾಜ್ಯಗಳಿಂದ ಮೀನು ಸರಬರಾಜು ಆಗುತ್ತವೆ. ಇಲ್ಲಿ ಪ್ರತಿ ದಿನ ಬೆಳಿಗ್ಗೆ 2 ರಿಂದ 7 ರವರೆಗೆ ಹರಾಜು ನಡೆಯುತ್ತದೆ. ಚಿಲ್ಲರೆ ಮಾರಾಟಗಾರರು ಮೀನು ಖರೀದಿ ಮಾಡಲು ಬಂದರ್ ಪ್ರದೇಶಕ್ಕೆ ಹೋಗುತ್ತಾರೆ. ಆದರೆ, ಈ ಸಾಂಕ್ರಾಮಿಕ ರೋಗದ ಪ್ರಸರಣವನ್ನು ತಡೆಯಲು ಮಾರಾಟಗಾರರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದಿಲ್ಲ ಎಂಬ ಆರೋಪಗಳಿವೆ.
ಹಡಗುಕಟ್ಟೆಗೆ ಹೋಗುವ ರಸ್ತೆಯಲ್ಲಿ ಮೀನು ಹರಾಜು ಮಾಡಲು ಜಿಲ್ಲಾಡಳಿತವು ಸೌಲಭ್ಯವನ್ನು ಒದಗಿಸಿ ಕೊಟ್ಟಿದೆ. ರಾತ್ರಿಯ ಸಂದರ್ಭ ವ್ಯಾಪಾರಕ್ಕೆ ಅನುಕೂಲವಾಗುವಂತೆ ಬೆಳಕಿನ ಸೌಲಭ್ಯವನ್ನೂ ಮಾಡಿದೆ. ಇತರ ರಾಜ್ಯಗಳಿಂದ ಇಲ್ಲಿಗೆ ಸುಮಾರು 25 ಬೃಹತ್ ಮೀನಿನ ಟ್ರಕ್ಗಳು ಬರುತ್ತವೆ. ತಮ್ಮ ಮಿನಿ ಟ್ರಕ್ಗಳು ಅಥವಾ ಟೆಂಪೋಗಳೊಂದಿಗೆ ಮಾರಾಟಗಾರರು ಬಂದರ್ ಪ್ರದೇಶಕ್ಕೆ ಬರುತ್ತಾರೆ.
ಸುಮಾರು 500 ಮೀನು ಮಾರಾಟಗಾರರು ಇಲ್ಲಿ ಸೇರುವ ಕಾರಣ ಹಾಗೂ ರಸ್ತೆ ಕಿರಿದಾದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿದೆ ಎಂದು ಹರಾಜುರಾರರಲ್ಲಿ ಒಬ್ಬರಾದ ಮಜೀದ್ ಹೇಳಿದ್ದು, ಪೊಲೀಸರು ಗುಂಪನ್ನು ನಿಯಂತ್ರಿಸಲು ಸಾಧ್ಯವಾದರೆ ಉತ್ತಮ ಎಂದು ತಿಳಿಸಿದರು.
ನಗರ ಹಾಗೂ ಬೇಂಗ್ರೆ ನಡುವೆ ಬೆಳಿಗ್ಗೆ ಮತ್ತು ಮಧ್ಯಾಹ್ನದವರೆಗೆ ಪ್ರಯಾಣಿಸುವ ಜನರು ದೋಣಿಯಲ್ಲಿ ಕಷ್ಟಪಡುತ್ತಾರೆ. ಏಕೆಂದರೆ, ದೋಣಿಯಲ್ಲಿ ಒಂದೇ ಸಮಯದಲ್ಲಿ ಸುಮಾರು 30 ಜನರನ್ನು ಒಯ್ಯಲಾಗುತ್ತದೆ, ಇದರಿಂದಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಜನಸಂದಣಿಯನ್ನು ನಿಯಂತ್ರಿಸುವಂತೆ ಸ್ಥಳೀಯರು ಹಾಗೂ ಪೊಲೀಸರು ಹೇಳುತ್ತಾರೆ. ಅಲ್ಲದೇ, ಇಲ್ಲಿಗೆ ಆಗಮಿಸುವ ಪೊಲೀಸ್ ವಾಹನಗಳು ಸಹ ಅಂತರವನ್ನು ಕಾಯ್ದುಕೊಳ್ಳುವಂತೆ ಎಚ್ಚರಿಗೆ ನೀಡುತ್ತಾರೆ. ಆದರೆ, ಪೊಲೀಸರು ಸ್ಥಳದಿಂದ ವಾಪಾಸ್ಸಾಗುತ್ತಿದ್ದಂತೆ ಜನರು ಮತ್ತದೇ ಸ್ಥಿತಿಯನ್ನು ಮುಂದುವರೆಸುತ್ತಾರೆ ಎಂದು ಹೇಳಿದರು.