ಮಂಗಳೂರು, ಎ.22 (DaijiworldNews/PY) : ಪಾವೂರು ಪಂಚಾಯತ್ ವ್ಯಾಪ್ತಿಯ ಪಾವೂರು ಉಳಿಯ ಗ್ರಾಮದ ನೇತ್ರಾವತಿ ನದಿಯ ದಡದಲ್ಲಿ ಸಾಮೂಹಿಕ ಅಬಕಾರಿ ದಾಳಿ ನಡೆಸಿದ್ದು ಆರೋಪಿ ಸಹಿತ ಕಳ್ಳಭಟ್ಟಿ ತಯಾರಿಕೆಯ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಪ್ರೇಮ್ ಫೆರಾರೋ ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಶೈಲಜಾ ಕೋಟೆ ಅವರ ನಿರ್ದೇಶನದಂತೆ ಮಂಗಳೂರು ಉಪ ವಿಭಾಗ-1 ರ ಅಬಕಾರಿ ಡಿವೈಎಸ್ಪಿ ಶಿವಪ್ರಸಾದ್ ಅವರ ನೇತೃತ್ವದಲ್ಲಿ ಉಪ ವಿಭಾಗ-1ರ ಅಬಕಾರಿ ಇನ್ಸ್ಪೆಕ್ಟರ್ ಸೀಮಾ, ರತ್ನಾಕರ್. ರೈ, ಸಬ್ ಇನ್ಸ್ಪೆಕ್ಟರ್ ಪ್ರತಿಭಾ ಜಿ ಹಾಗೂ ಉಪ ವಿಭಾಗ 1 ರ ಎಲ್ಲಾ ಸಿಬ್ಬಂದಿಗಳೊಂದಿಗೆ ಕಳ್ಳಭಟ್ಟಿ ಸಾರಾಯಿ ತಯಾರಿಕಾ ಸ್ಥಳಕ್ಕೆ ದಾಳಿ ನಡೆಸಿದ್ದು, 2.5 ಲೀಟರ್ ಕಳ್ಳಭಟ್ಟಿ ಸಾರಾಯಿ, ಭಟ್ಟಿ ಸಾರಾಯಿ ತಯಾರಿಕೆಗಾಗಿ ದಾಸ್ತಾನಿಸಿರುವ 900ಲೀಟರ್ಗಳಷ್ಟು ಹುಳಿ ರಸ, 75ಕೆಜಿ ಬೆಲ್ಲ ಹಾಗೂ ಭಟ್ಟಿ ತಯಾರಿಸಲು ಉಪಯೋಗಿಸುವ ಸಲಕರಣೆಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು, ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿದೆ.