ಕಾಸರಗೋಡು, ಏ 22 (DaijiworldNews/SM): ಜಿಲ್ಲೆಯಲ್ಲಿ ಬುಧವಾರ ಹೊಸ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಕೇರಳದಲ್ಲಿ 11 ಪ್ರಕರಣ ದೃಢಪಟ್ಟಿದ್ದು, ಈ ಪೈಕಿ ಏಳು ಪ್ರಕರಣಗಳು ನೆರೆಯ ಕಣ್ಣೂರು ಜಿಲ್ಲೆಗೆ ಸೇರಿವೆ.
ಜಿಲ್ಲೆಯಲ್ಲಿ 26 ಮಂದಿ ಸೋಂಕಿತರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 172 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 146 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.
ಜಿಲ್ಲೆಯಲ್ಲಿ ನಿಗಾದಲ್ಲಿರುವವರ ಸಂಖ್ಯೆ ಇಳಿಮುಖವಾಗಿದ್ದು, 3741 ಮಂದಿಯಲ್ಲಿ 56 ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.