ಮಂಗಳೂರು, ಏ 22 (DaijiworldNews/SM): ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಜನತೆಗೆ ಬುಧವಾರದಂದು ಗುಡ್ ನ್ಯೂಸ್ ಲಭ್ಯವಾಗಿದೆ. ಜಿಲ್ಲೆಯಲ್ಲಿ ಬುಧವಾರದಂದು ಎಲ್ಲಾ ವರದಿಗಳು ನೆಗೆಟಿವ್ ಆಗಿದೆ.
ದ.ಕ. ಜಿಲ್ಲೆಯಲ್ಲಿ ಬುಧವಾರದಂದು ಜನತೆ ನಿಟ್ಟುಸಿರು ಬಿಡುವ ವರದಿ ಲಭ್ಯವಾಗಿದ್ದು, ಬುಧವಾರ ಲಭ್ಯವಾದ ೮೫ ಪ್ರಕರಣಗಳ ಪೈಕಿ ಎಲ್ಲವೂ ನೆಗೆಟಿವ್ ಆಗಿವೆ. ಇನ್ನು 495 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ.
ಇನ್ನು ಇಂದು ಹನ್ನೊಂದು ಮಂದಿಯನ್ನು ನಿಗಾ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯ ತನಕ ಜಿಲ್ಲೆಯಲ್ಲಿ 12 ಮಂದಿ ಗುಣಮುಖರಾಗಿದ್ದು, ಮೂವರು ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನು ೯೪೧ ಮಂದಿಯನ್ನು ಫಿವರ್ ಕ್ಲೀನಿಕ್ ಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಎಸ್ ಐ ಆಸ್ಪತ್ರೆಯಲ್ಲಿ 10 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. 10 ಮಂದಿ ಎನ್ ಐಟಿಕೆಯಲ್ಲಿ ಬುಧವಾರದಂದು ದಾಖಲಾಗಿದ್ದು ಒಟ್ಟು 49 ಮಂದಿ ಎನ್ ಐಟಿಕೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು 39,290 ಮಂದಿಯನ್ನು ಬುಧವಾರದ ತನಕ ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ನೆಗೆಟಿವ್:
ಉಡುಪಿ ಜಿಲ್ಲೆಯಲ್ಲಿ ಬುಧವಾರವೂ ನೆಗೆಟಿವ್ ವರದಿ ಮುಂದುವರೆದಿದೆ. ಬುಧವಾರದ ಏಕೈಕ ವರದಿಯೂ ನೆಗೆಟಿವ್ ಆಗಿದೆ. ಇಲ್ಲಿಯ ತನಕ ಜಿಲ್ಲೆಯಲ್ಲಿ 880 ಮಂದಿ ಕೊರೊನಾ ನೆಗೆಟಿವ್ ಆಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆ ಕೇವಲ ಮೂರೇ ಮೂರು ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಇನ್ನು 110 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. 1892 ಮಂದಿ 28 ದಿನಗಳ ನಿಗಾ ಪೂರೈಸಿದ್ದು, 2325 ಮಂದಿ 14 ದಿನಗಳ ನಿಗಾ ಪೂರೈಸಿದ್ದಾರೆ. 697 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.