ಪಡುಬಿದ್ರೆ, ಏ 22 (DaijiworldNews/SM): ಕೊರೊನಾ ರೋಗದ ಕುರಿತು ಜಾಗೃತಿ ಮೂಡಿಸಲು ಮನೆಗೆ ಭೇಟಿ ನೀಡಿದ ವೇಳೆ ಪಡುಬಿದ್ರಿ ಆರೋಗ್ಯ ಕೆಂದ್ರ ನರ್ಸ್ ಓರ್ವರಿಗೆ ಮನೆಯವರೊಬ್ಬರು ಬೆದರಿಕೆ ಹಾಕಿದ ಘಟನೆ ಏಪ್ರಿಲ್ 22ರ ಬುಧವಾರದಂದು ನಡೆದಿದೆ.
ಪಡುಬಿದ್ರಿ ಆರೋಗ್ಯ ಕೇಂದ್ರದ ನರ್ಸ್ ವೊಬ್ಬರು ಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆ ಜಾಗೃತಿ ಮೂಡಿಸುತ್ತಿದ್ದರು. ಈ ಸಂದರ್ಭ ಇಲ್ಲಿನ ಮುಮ್ತಾಜ್ ಎಂಬವರ ಮನೆಗೆ ಕೊರೊನಾ ರೋಗದ ಸಂದರ್ಭದಲ್ಲಿ ಮನೆ ಮಂದಿಗೆ ಜಾಗೃತಿ ಮೂಡಿಸಿದ್ದಾರೆ. ಮನೆಯಲ್ಲಿ ಹೆಚ್ಚು ಜನ ಸೇರಬಾರದು ಎಂದು ಮನವರಿಕೆ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯವರು ನೀನು ಫೀಲ್ಡಿಗೆ ಬಾ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ.
ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.