ಮಂಗಳೂರು, ಏ 23 (Daijiworld News/MSP): ಬಂಟ್ವಾಳದ ಕಸಬಾ ನಿವಾಸಿ, ಕೊರಾನಾ ಸೋಂಕಿಗೆ ಬಲಿಯಾದ 50 ವರ್ಷದ ಮಹಿಳೆಯ ಪತಿ, ಇಬ್ಬರು ಮಕ್ಕಳ ಗಂಟಲ ಸ್ರಾವದ ವರದಿ ಆರೋಗ್ಯ ಇಲಾಖೆಯ ಕೈಸೇರಿದ್ದು, ಮೊದಲ ಹಂತದ ಮೂರೂ ವರದಿಗಳು ನೆಗೆಟಿವ್ ಬಂದಿವೆ. ಹೀಗಾಗಿ ಸ್ಥಳೀಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಈ ಪೈಕಿ ಇನ್ನಿಬ್ಬರ ವರದಿಗಾಗಿ ಕಾಯಲಾಗುತ್ತಿದೆ.
ಎ. 18ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರನ್ನು ಪರೀಕ್ಷೆಗೊಳಪಡಿಸಿದಾಗ ವರದಿ ನೆಗಟಿವ್ ಬಂದಿತ್ತು. ಆದರೆ ಬಳಿಕ ಮೃತಪಟ್ಟ ಇವರನ್ನು ಪರೀಕ್ಷೆಗೊಳಪಡಿಸಿದಾಗ ಕೋವಿಡ್-19 ದೃಢಪಟ್ಟತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತ ಮಹಿಳೆಯ ಅತ್ತೆ ಮತ್ತು ಅವರನ್ನು ಉಪಚರಿಸಿದವರ ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಇನ್ನಷ್ಟೇ ಸಿಗಬೇಕಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.