ಬೆಳ್ತಂಗಡಿ, ಏ 23 (Daijiworld News/MSP): ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕೊಡಮಾಡಲ್ಪಟ್ಟ ಕೋವಿಡ್-೧೯ ಗಂಟಲು ದ್ರವದ ಮಾದರಿ ಸಂಗ್ರಹಣ ಕೇಂದ್ರವನ್ನು ಶಾಸಕ ಹರೀಶ್ ಪೂಂಜ ಬುಧವಾರ ಆಸ್ಪತ್ರೆಗೆ ಹಸ್ತಾಂತರಿಸಿ ಚಾಲನೆ ನೀಡಿದರು.
ಸುಮಾರು ೩೫ ಸಾವಿರ ರೂ. ವೆಚ್ಚದಿಂದ ನಿರ್ಮಾಣಗೊಂಡಿದ್ದು ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರತಿ ತಾಲೂಕಿಗೆ ಒಂದು ಬೂತ್ ನೀಡಲಾಗುತ್ತಿದೆ. ಇದರಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಕೋವಿಡ್-೧೯ ಸೋಂಕಿತ ವಿಕ್ತಿಯ ಗಂಟಲು ದ್ರವ ಸಂಗ್ರಹ (ಕಿಯೋಸ್ಕ್) ನಾಳೆಯಿಂದಲೇ ಆರಂಭವಾಗಲಿದೆ. ಸೋಂಕಿತ ವ್ಯಕ್ತಿ ಮತ್ತು ವೈದ್ಯರ ನೇರ ಸಂಪರ್ಕ ತಡೆಯಲು ಉತ್ತಮ ವಿಧಾನವಾಗಿದೆ ಎಂದು ನಿರ್ಮಿತಿ ಕೇಂದ್ರದ ನಿದೇರ್ಶಕ ರಾಜೇಂದ್ರ ಕಲ್ಬಾವಿ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ| ವಿದ್ಯಾವತಿ, ಡಾ| ಆದಂ, ಸಹಾಯಕ ಆಡಳಿತಾಧಿಕಾರಿ ಶ್ರೀಕಾಂತ ಹೆಗ್ಡೆ, ಅಧೀಕ್ಷಕ ಲೋಕೇಶ್, ಪ್ರಯೋಗಾಲಯ ಸಿಬಂದಿ ಕಿರಣ್ ಪಂಡಿತ್, ಬಿಜೆಪಿ ಮಂಡಲ ನಿಯೋಜಿತ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೆ.ಆರ್. ಮತ್ತು ಆಸ್ಪತ್ರೆ ಸಿಬಂದಿಗಳು ಇದ್ದರು.