ಉಡುಪಿ, ಎ.23 (DaijiworldNews/PY) : ಮಂಗಳೂರಿನಲ್ಲಿ ಎ.24ರಂದು ಮತ್ತು ಎ.25ರಂದು ಉಡುಪಿಯಲ್ಲಿ ಶೂನ್ಯ ನೆರಳು ದಿನ ಎಂಬ ಖಗೋಳ ವಿದ್ಯಮಾನವನ್ನು ಆಚರಿಸಲಾಗುವುದು.
ಪರದೆಯ ಮೇಲೆ ಒಂದು ವಸ್ತುವಿನ ಮೂಲಕ ಬೆಳಕನ್ನು ಹಾಯಿಸುವಾಗ ಆ ವಸ್ತು, ಬೆಳಕನ್ನು ನಿರ್ಬಂಧಿಸುವುದರಿಂದ ನೆರಳು ರಚನೆಯಾಗುತ್ತದೆ. ಉದಾಹರಣೆಯೆಂದರೆ, ನೀವು ವಸ್ತು ಹಾಗೂ ನೆಲ ಪರದೆ ಸೂರ್ಯನು ಬೆಳಕಿನ ಮೂಲ ಎಂದು ಕಲ್ಪನೆ ಮಾಡಿಕೊಂಡರೆ, ಆಕಾಶದಲ್ಲಿ ಸೂರ್ಯ ಲಂಬವಾಗಿ ಚಲಿಸುವಾಗ ನಮ್ಮ ನೆರಳು ನಮ್ಮ ಪಾದಕ್ಕೆ ಹೊಂದಿಕೊಂಡತೆ ರಚನೆಯಾಗುತ್ತದೆ. ಸೂರ್ಯ ಚಲಿಸುತ್ತಿರುವ ಸಂದರ್ಭ, ನೆರಳೂ ಕೂಡಾ ಸೂರ್ಯಾಸ್ತದೊಂದಿಗೆ ಮರೆಯಾಗುತ್ತದೆ. ಆದರೆ, ತಮ್ಮಯ ಮೇಲೆ ಸೂರ್ಯ ನೇರವಾಗಿ ಹೊಳೆಯುತ್ತಿದ್ದರೆ, ಆಗ ನಮ್ಮ ನೆರಳು ಸರಿಯಾಗಿ ನಮ್ಮ ಕೆಳಗೆ ಇರುತ್ತದೆ. ಹಾಗಾಗಿ ಅದು ಕಾಣುವುದಿಲ್ಲ. ಇದನ್ನು ಶೂನ್ಯ ನೆರಳು ಎಂದು ಕರೆಯುತ್ತೇವೆ.
ವರ್ಷದಲ್ಲಿ ಎಪ್ರಿಲ್ ಹಾಗೂ ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಶೂನ್ಯ ನೆರಳು ಬಂದರೂ, ಮಳೆಗಾಲದ ಕಾರಣ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ನೆರಳಿನ ದಿನವನ್ನು ವೀಕ್ಷಿಸುವುದು ಕಷ್ಟ. ಹಾಗಾಗಿ, ಕರಾವಳಿಯಲ್ಲಿ ಎಪ್ರಿಲ್ 24 ಹಾಗೂ 25ರಂದು ಶೂನ್ಯ ನೆರಳು ಸಂಭವಿಸುವ ಸಂದರ್ಭವೇ ಇದನ್ನು ನೋಡಬೇಕು.
ಶೂನ್ಯ ನೆರಳನ್ನುಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಎಪ್ರಿಲ್ ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸುತ್ತದೆ. ಮಂಗಳೂರಿನಲ್ಲಿ ಎ.24ರಂದು ಅಪರಾಹ್ನ 12.28ಕ್ಕೆ ಹಾಗೂ ಆಗಸ್ಟ್ನಲ್ಲಿ 18ಕ್ಕೆ ಅಪರಾಹ್ನ 12.33ಕ್ಕೆ ವೀಕ್ಷಿಸಬಹುದು. ಉಡುಪಿಯಲ್ಲಿ ಎ.25ರಂದು ಅಪರಾಹ್ನ 12.29ಕ್ಕೆ ಹಾಗೂ ಆಗಸ್ಟ್ 17ಕ್ಕೆ ಅಪರಾಹ್ನ 12.34ಕ್ಕೆ ವೀಕ್ಷಿಸಬಹುದಾಗಿದೆ.
ಬೆಂಗಳೂರಿನಲ್ಲಿ ಇದನ್ನು ಜನರು 12:17 ಕ್ಕೆ ವೀಕ್ಷಿಸಬಹುದು. ಮೂಡುಬಿದ್ರೆ, ಬಂಟ್ವಾಳ, ಸಕಲೇಶಪುರ ಹಾಗೂ ಹಾಸನದಲ್ಲಿ ಸಹ ಎ.24ರಂದು ಶೂನ್ಯ ನೆರಳು ದಿನ ಆಚರಿಸಲಿದ್ದು, ಬ್ರಹ್ಮಾವರ, ಕಾರ್ಕಳ, ಶೃಂಗೇರಿ, ಕುದುರೆಮುಖ, ಚಿಕ್ಕಮಗಳೂರು ಮುಂತಾದ ಸ್ಥಳಗಳಲ್ಲಿ ಎ.25ರಂದು ಶೂನ್ಯ ನೆರಳು ದಿನ ಆಚರಿಸಲಿವೆ.