ಮಂಗಳೂರು, ಎ.23 (Daijiworld News/MB) : ಬುಧವಾರವಷ್ಟೇ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರೆ ಅಂತವರ ವಿರುದ್ದ ಗೂಂಡಾ ಕೇಸ್ ಹಾಕುವ ಮೂಲಕ ಜೈಲಿಗಟ್ಟಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದು ಇಂದು ವ್ಯಕ್ತಿಯೋರ್ವ ಕರ್ತವ್ಯ ನಿರತರಾಗಿದ್ದ ಪೊಲೀಸ್ ಅಧಿಕಾರಿಯ ಮೇಲೆಯೇ ವಾಹನ ಹತ್ತಿಸಿದ್ದಾನೆ.
ಈ ವೇಳೆ ಟ್ರಾಫಿಕ್ ಎಎಸ್ಐ ಸೂರಜ್ ಕುಮಾರ್ ಅವರಿಗೆ ಗಾಯವಾಗಿದ್ದು ಪೊಲೀಸರು ಆರೋಪಿ ಸಾಧಾಕತ್ ನನ್ನು ಬಂಧನ ಮಾಡಿದ್ದಾರೆ.
ಲಾಕ್ಡೌನ್ ಹಿನ್ನಲೆಯಲ್ಲಿ ಬರ್ಕೆ ಬಿಜೈ ಬಿಗ್ ಬಜಾರ್ ಬಳಿ ಬ್ಯಾರಿಕೇಡ್ ಹಾಕಲಾಗಿದ್ದು ಪೊಲೀಸರು ವಾಹನವನ್ನು ತಡೆದು ತಪಾಸಣೆ ಮಾಡುತ್ತಿದ್ದರು. ಆರೋಪಿಯ ವಾಹನವನ್ನು ಕೂಡಾ ಪೊಲೀಸರು ತಪಾಸಣೆ ನಡೆಸಲೆಂದು ತಡೆಯಲೆತ್ನಿಸಿದ್ದು ಈ ಸಂದರ್ಭದಲ್ಲಿ ಆರೋಪಿ ಪೊಲೀಸರ ಮೇಲೆಯೇ ವಾಹನ ಹತ್ತಿಸಿದ್ದಾನೆ. ಈ ವೇಳೆ ಟ್ರಾಫಿಕ್ ಎಎಸ್ಐ ಸೂರಜ್ ಕುಮಾರ್ ಅವರಿಗೆ ಗಾಯವಾಗಿದ್ದು ಪೊಲೀಸ್ ಕನ್ನಡಕ ತುಂಡಾಗಿದೆ.
ಪ್ರಸ್ತುತ ಆರೋಪಿಯನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ.