ಮಂಗಳೂರು, ಏ 23 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಕೊರೊನಾ ಪಾಸಿಟಿವ್ ಪತ್ತೆಯಾದ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಬಂಟ್ವಾಳ ಪಟ್ಟಣ ಹಾಗೂ ಮಂಗಳೂರಿನ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆ ಸೇರಿದಂತೆ ಸುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿ ಸೀಲ್ಡೌನ್ ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಯ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂಬುವುದಾಗಿ ಘೋಷಣೆ ಮಾಡಲಾಗಿದೆ.
ಯಾವುದೆಲ್ಲ ಬಫರ್ ಝೋನ್ ಪ್ರದೇಶಗಳು?
ಫಸ್ಟ್ ನ್ಯೂರೋ ಆಸ್ಪತ್ರೆಯಿಂದ 5 ಕಿ.ಮೀ ವ್ಯಾಪ್ತಿ ಬಫರ್ ಝೋನ್
ಕಲ್ಲಾಪು, ಕುಡುಪು, ಫರಂಗಿಪೇಟೆ, ಫಳ್ನೀರ್
1,82,500 ಜನಸಂಖ್ಯೆ ಇರುವ ಪ್ರದೇಶ
ಅಂಗಡಿಗಳು 1,800, ಕಚೇರಿ 8, ಮನೆಗಳು 41,900
ಬಫರ್ ಝೋನ್ ನಲ್ಲಿ ಮಂಗಳೂರು ತಾಲೂಕಿನ ತಹಶೀಲ್ದಾರಿಗೆ ಅಧಿಕಾರವಿರುತ್ತೆ
ಬಫರ್ ಝೋನ್ ಹೇಗಿರುತ್ತೆ?
ಲಾಕ್ ಡೌನ್ ನಿಯಮದಂತೆ ಬಫರ್ ಝೋನ್ ನಲ್ಲಿ ಅವಕಾಶ
ಬೆಳಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
12 ರ ಬಳಿಕ ಯಾರು ಕೂಡ ಮನೆಯಿಂದ ಹೊರಗೆ ಬರುವಂತಿಲ್ಲ
ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ
ಜ್ವರ ಇನ್ನಿತರ ಕಾಯಿಲೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ
ಎಂದಿನಂತೆ ಲಾಕ್ ಡೌನ್ ನಿಯಮದಂತೆ ಇರುತ್ತೆ
ಅಗತ್ಯ ವಸ್ತುಗಳಿಗೆ ಅವಕಾಶ ಮಾಡಿಕೊಡಲಾಗುತ್ತೆ
ಸೀಲ್ ಡೌನ್ನಲ್ಲಿ ಪ್ರದೇಶ ಹೇಗಿರುತ್ತೆ?
ಸೀಲ್ಡೌನ್ ಪ್ರದೇಶದಲ್ಲಿ ಮನೆಯಿಂದ ಹೊರ ಹೋಗುವಂತಿಲ್ಲ
ಸೀಲ್ಡೌನ್ ಪ್ರದೇಶದಲ್ಲಿ ಯಾರ ಓಡಾಟಕ್ಕೂ ಅವಕಾಶವಿಲ್ಲ
ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ, ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ
ಲಾಕ್ಡೌನ್ ಸಂದರ್ಭದ ವಿನಾಯಿತಿ ಸೀಲ್ಡೌನ್ ಪ್ರದೇಶಕ್ಕೆ ಅನ್ವಯವಾಗುವುದಿಲ್ಲ
ಬೆಳಿಗ್ಗೆಯಿಂದ 12 ಗಂಟೆವರೆಗೂ ಅಗತ್ಯ ಸಾಮಾಗ್ರಿ ಖರೀದಿಗೂ ಅವಕಾಶವಿಲ್ಲ
ಜನರ ಅವಶ್ಯಕ ಸಾಮಾಗ್ರಿಯ ಬೇಡಿಕೆಯನ್ನು ಜಿಲ್ಲಾಡಳಿತ ನೆರವೇರಿಸುತ್ತದೆ
ಸೀಲ್ಡೌನ್ ಆಗಿರುವ ಪ್ರದೇಶಗಳು:
ಫಸ್ಟ್ ನ್ಯೂರೋ ಆಸ್ಪತ್ರೆಯ ಪೂರ್ವ ಭಾಗದ ಕಣ್ಣಗುಡ್ಡೆಯ ತನಕ ಸೀಲ್ ಡೌನ್
ಫಸ್ಟ್ ನ್ಯೂರೋ ಆಸ್ಪತ್ರೆಯ ಪಶ್ಚಿಮದಿಂದ ರಮಾನಾಥ್ ಕೃಪಾ ರೈಸ್ಮಿಲ್ರವರೆಗೆ ಸೀಲ್ಡೌನ್
ಫಸ್ಟ್ ನ್ಯೂರೋ ಆಸ್ಪತ್ರೆಯ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 73ರವರೆಗೆ ಸೀಲ್ಡೌನ್
ಫಸ್ಟ್ ನ್ಯೂರೋ ಆಸ್ಪತ್ರೆಯ ದಕ್ಷಿಣಕ್ಕೆ ಸರ್ಕಾರಿ ಜಾಗದ ಸುತ್ತ ಸೀಲ್ಡೌನ್ ಮಾಡಲಾಗಿದೆ
ಸೀಲ್ಡೌನ್ ಪ್ರದೇಶದಲ್ಲಿ 5 ಅಂಗಡಿ, 2 ಮನೆ, ಆಸ್ಪತ್ರೆ ಸೀಲ್ಡೌನ್ ಆಗಿದೆ
ಫಸ್ಟ್ ನ್ಯೂರೋ ಆಸ್ಪತ್ರೆಯ ಸುತ್ತವಿರುವ ಜನಸಂಖ್ಯೆ - 16
ಫಸ್ಟ್ ನ್ಯೂರೋ ಆಸ್ಪತ್ರೆ ಸದ್ಯ ದ.ಕ ಜಿಲ್ಲಾಡಳಿತದ ಸುಪರ್ದಿಯಲ್ಲಿ
ಸೀಲ್ಡೌನ್ ಪ್ರದೇಶದ ಯಾವುದೇ ಬೆಳವಣಿಗೆಗೂ ಜಿಲ್ಲಾಡಳಿತದ ಆದೇಶ ಮುಖ್ಯ