ಕಾಸರಗೋಡು, ಏ 23 (DaijiworldNews/SM): ಜಿಲ್ಲೆಯಲ್ಲಿ ಗುರುವಾರ ಆರುಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಡಿದ್ದು, ಇದರಿಂದಾಗಿ 152 ಮಂದಿ ರೋಗ ಮುಕ್ತರಾಗಿದ್ದಾರೆ.
ಇನ್ನು 20 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 172 ಮಂದಿಗೆ ಸೋಂಕು ದೃಢಪಟ್ಟಿತ್ತು. ಗುರುವಾರ ಹೊಸ ಸೋಂಕು ಪ್ರಕರಣ ದೃಢಪಟ್ಟಿಲ್ಲ. ಇನ್ನು ನಿಗಾದಲ್ಲಿರುವವವರ ಸಂಖ್ಯೆ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ 3126 ಮಂದಿ ನಿಗಾದಲ್ಲಿದ್ದಾರೆ. 56 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಇನ್ನೂ 488 ಮಂದಿಯ ಸ್ಯಾಂಪಲ್ ವರದಿ ಬರಬೇಕಿದೆ. ಕೇರಳದಲ್ಲಿ ಗುರುವಾರ ಹತ್ತು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಡುಕ್ಕಿ ನಾಲ್ಕು, ಕೋಜಿಕ್ಕೋಡ್, ಕೋಟೆಯಂ ತಲಾ ಎರಡು, ತಿರುವನಂತಪುರ, ಕೊಲ್ಲಂನಲ್ಲಿ ತಲಾ ಒಂದು ಪ್ರಕರಣ ದ್ರಢಪಟ್ಟಿದೆ.