ಬೆಳ್ಳಾರೆ, ಎ.24 (Daijiworld News/MB) : ಬೆಳ್ಳಾರೆ ಪಿಡಿಒ ಅವರಿಗೆ ಜ್ವರ ಹಾಗೂ ಗಂಟಲು ಕೆರೆತ ಇದ್ದ ಕಾರಣದಿಂದಾಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿ ಸ್ವಯಂ ಪ್ರೇರಿತರಾಗಿ ಕೊರೊನಾ ತಪಾಸಣೆ ಮಾಡಿಸಿದ್ದು ಈ ಬೆನ್ನಲ್ಲೇ ಬೆಳ್ಳಾರೆ ಪಿಡಿಒ ಅವರಿಗೆ ಸೋಂಕು ತಗುಲಿದೆ ಎಂಬ ಅಪಪ್ರಚಾರ ಆರಂಭವಾಗಿದೆ.
ಈ ಬಗ್ಗ ಸ್ಪಷ್ಟನೆ ನೀಡಿದ ಅವರು, ಇದು ಅಪಪ್ರಚಾರ, ನನಗೆ ಸೋಂಕು ತಗುಲಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ತಪಾಸಣೆಯ ವರದಿಯೂ ಬಂದಿದ್ದು ಅದರಲ್ಲಿ ನೆಗೆಟಿವ್ ವರದಿ ಬಂದಿದೆ.
ಸಣ್ಣ ಮಟ್ಟದ ಅನಾರೋಗ್ಯದ ಕಾರಣದಿಂದಾಗಿ ಕಳೆದ ಶನಿವಾರ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ ಕಾರಣದಿಂದಾಗಿ ನಾಲ್ಕು ದಿನಗಳ ಕಾಲ ಅವರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ಪರೀಕ್ಷೆ ನಡೆಸಿದ ಮೂರು ದಿನಗಳ ಬಳಿಕ ವರದಿ ಬಂದಿದ್ದು ನೆಗೆಟಿವ್ ಬಂದ ಬಳಿಕ ಪಿಡಿಒ ತಮ್ಮ ನಿವಾಸಕ್ಕೆ ವಾಪಾಸ್ ಆಗಿದ್ದರು.